ಕುಂಬಳೆ: ದೈವಾನುಗ್ರಹವಿಲ್ಲದೆ ಜಗತ್ತಿನಲ್ಲಿ ಯಾವೊಂದು ಚರಾಚರ ವಸ್ತುಗಳಿಗೂ ಅಸ್ತಿತ್ವ ಇರಲಾರದು. ದೈವಾನುಗ್ರಹವೆಂಬುದು ಧನಾತ್ಮ ಶಕ್ತಿ ಸಂಶಯನವಾಗಿದ್ದು, ದೇವಾಲಯಗಳು ಅದರ ಕೇಂದ್ರವಾಗಿ ಟ್ರಾನ್ಸಿಸ್ಟರ್‍ಗಳಂತೆ ಕಾರ್ಯನಿರ್ವಹಿಸುತ್ತದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ತಿಳಿಸಿದರು.
ದರ್ಬಾರ್‍ಕಟ್ಟೆ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ನೂತನ ದೇವಾಲಯದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನಗೈದು ಮಾತನಾಡಿದರು.
ಮಾನವ ಜೀವನದ ಸಂಪತ್ತುಗಳು ಪುಣ್ಯಕರ್ಮದಿಂದ ಲಭ್ಯವಾದಂತವು. ಸಂಪತ್ತಿನ ಸದ್ವಿನಿಯೋಗವಾದಾಗ ಮಾತ್ರ ಸುಖ-ನೆಮ್ಮದಿ ಲಭ್ಯವಾಗಲು ಸಾಧ್ಯ. ಸಂಪತ್ತಿನ ದುರ್ವಿನಿಯೋಗವು ರಾಕ್ಷಸನೊಂದಿಗೆ ವಿವಾಹವಾದಂತೆ ಭೀಕರ ಮತ್ತು ಅಸುರಕ್ಷಿತವಾದ ಮನೋಸ್ಥಿತಿಗೆ ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವೈದಿಕ, ಧಾರ್ಮಿಕ ಚಟುವಟಿಕೆಗಳಿಗೆ ಸಂಪತ್ತು, ಜೀವನವನ್ನು ತೆರೆದುಕೊಂಡಾಗ ಪುಣ್ಯ ಪ್ರಾಪ್ತವಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
ಅಹಮ್ಮದ್ ನಗರದ ಸಾಯಿದೀಪ್ ಆಸ್ಪತ್ರೆಯ ಅಧ್ಯಕ್ಷ ಡಾ. ಎಸ್.ಎಸ್.ದೀಪಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ಅವರು, ದೇವತಾ ಸಮೂಹಗಳಲ್ಲೇ ಅತ್ಯುತ್ಕøಷ್ಟಳಾದವಳು ರಾಜರಾಜೇಶ್ವರಿ ಮಹಾದೇವಿಯಾಗಿದ್ದಾಳೆ. ಪಾಣಿಪೀಠ ಮತ್ತು ಬಿಂಬಗಳು ಜಗತ್ತಿನ ಮೂಲ ಸೃಷ್ಟಿಗೆ ಕಾರಣವಾದ ಸೂತ್ರವಾಗಿದ್ದು, ಅದರ ಪ್ರತೀಕವೆಂಬಂತೆ ಆಲಯಗಳ ಗರ್ಭಗೃಹದಲ್ಲಿ ಪ್ರತಿಷ್ಠೆ ನೆರವೇರುತ್ತದೆ. ಶ್ರೀಚಕ್ರ ವಾಸಿಯಾದ ಜಗಜ್ಜನನಿ ರಾಜರಾಜೇಶ್ವರಿ ಸೃಷ್ಟಿ, ಸ್ಥಿತಿ, ಲಯಕರ್ತಳಾಗಿ ಜಗತ್ತನ್ನು ಪೊರೆಯುತ್ತಾಳೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠೆಗೊಂಡಿರುವ ರಾಜರಾಜೇಶ್ವರಿಯ ಅನುಗ್ರಹದಿಂದ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದರು. ಯಾವ ಕಾಲದಲ್ಲಿ ಭೂಮಿಯಲ್ಲಿ ಏನೆಲ್ಲ ಪ್ರಕಟಗೊಳ್ಳಬೇಕೋ ಅಂತಹ ಕಾಲ ಸನ್ನಿಹಿತವಾದಾಗ ಶಕ್ತ ವ್ಯಕ್ತಿಯ ಮೂಲಕ ಪ್ರಸ್ತುತ ದೇವಾಲಯ ನಿರ್ಮಾಣಗೊಂಡಿರುವುದು ದೈವಶಕ್ತಿಯ ಪ್ರತ್ಯಕ್ಷ ಪ್ರಮಾಣವಾಗಿ ದೈವತ್ವ ಚೈತನ್ಯದ ಸ್ವರೂಪವಾಗಿ ಗೋಚರಿಸಿದೆ. ಭಕ್ತಿ ಸಡಗರದಿಂದ ನಾವು ಅರ್ಚಿಸುವ ಪೂಜೆಗಳಿಂದ ಸನ್ಮಂಗಳ ಪ್ರಾಪ್ತವಾಗುತ್ತದೆ ಎಂದು ತಿಳಿಸಿದರು.
ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಸನತ್ ಶೆಟ್ಟಿ ಕೊಡತ್ತೂರು ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭದಲ್ಲಿ ಕರ್ನಾಟಕದ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉದ್ಯಮಿ ಕೆ.ಡಿ.ಶೆಟ್ಟಿ ಮುಂಬೈ, ಪುರುಷೋತ್ತಮ ಭಂಡಾರಿ, ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದ ಟ್ರಸ್ಟಿ ಯು.ಟಿ.ಆಳ್ವ, ಎ.ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಸುಭಾಶ್ ಅಡ್ಯಂತಾಯ ಬಂಬ್ರಾಣ, ಡಾ.ಸತ್ಯಪ್ರಕಾಶ್ ರೈ ಮುಂಬೈ, ಮಧೂರು ಶ್ರೀಕ್ಷೇತ್ರದ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ, ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ, ಉದಯಕುಮಾರ್ ಶೆಟ್ಟಿ, ಪ್ರೇಮಚಂದ್ರ ನಾಯರ್, ಪುಂಡರೀಕಾಕ್ಷ ಕೆ.ಎಲ್., ನಾಞಪ್ಪ ರೈ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಎಚ್.ಶಿವರಾಮ ಭಟ್ ಕಾರಿಂಜ ಹಳೆಮನೆ ಸ್ವಾಗತಿಸಿ, ಮಂಜುನಾಥ ಆಳ್ವ ಮಡ್ವ ವಂದಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಪ್ಲವರ್ ಟಿ.ವಿ.ಕಾಮಿಡಿ ಉತ್ಸವಂ ಖ್ಯಾತಿಯ ವೈಷ್ಣವ, ಕೆ.ಸುನಿಲ್, ಶಿವಾನಿ ಎಡವಣ್ಣ ಹಾಗೂ ಶ್ರೀಲೇರ್ಶ ಕ್ಲಿನೀಪರ್ ಅವರಿಂದ ನೃತ್ಯ ವೈಭವ ನಡೆಯಿತು.





