ಕಾಸರಗೊಡು: ರಾಜ್ಯ ಸರಕಾರದ ವತಿಯಿಂದ ಅಸಾಪ್ ಯೋಜನೆ ವ್ಯಾಪ್ತಿಯಲ್ಲಿ ನಡೆಸುವ ಕೇರಳದ ಅತಿ ದೊಡ್ಡಹ್ಯಾಕತ್ತೋನ್( ಸಮಸ್ಯೆಗಳಿಗೆ ಗುಂಪು ಚರ್ಚೆ ಇತ್ಯಾದಿ ನಡೆಸಿ ನಿಗದಿತ ಅವಧಿಯಲ್ಲಿ ಪರಿಹಾರ ಕಂಡುಕೊಳ್ಳುವುದು) ಆಗಿರುವ 'ರೀಬೂಟ್ ಕೇರಳ ಹ್ಯಾಕತ್ತೋನ್' ಕಾಸರಗೋಡಿನಲ್ಲಿ ಶುಕ್ರವಾರ ಆರಂಭಗೊಂಡಿತು.
ಪೆರಿಯ ಪಾಲಿಟೆಕ್ನಿಕ್‍ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ಹ್ಯಾಕತ್ತೋನ್‍ಗೆ ಚಾಲನೆ ನೀಡಿದರು. ಅಂತಾರಾಷ್ಟ್ರೀಯ ಶ್ರೇಣಿಯ ಹ್ಯಾಕತ್ತೋನ್ ಕಂದಾಯ, ದುರಂತನಿವಾರಣೆ ಮತ್ತು ಇತರ ವಲಯಗಳಲಿ ್ಲತಲೆದೋರುವ ಸಂದಿಗ್ಧತೆಗಳಿಗೆ ತಂತ್ರಜ್ಞಾನದ ಮತ್ತಿತರ ಸಹಾಯದೊಂದಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿನಡೆಸಲಾಗುವ ಹತ್ತು ಹ್ಯಾಕತ್ತೊನ್‍ಗಳಲ್ಲಿ ಇದೂ ಒಂದಾಗಿದೆ.
ರಾಜ್ಯದ ವಿವಿಧ ಕಾಲೇಜುಗಳಿಂದ ಆಯ್ದ 6 ವಿದ್ಯಾರ್ಥಿಗಳು ಸೇರಿರುವ 30 ಬ್ಯಾಚ್‍ಗಳು ಹ್ಯಾಕತ್ತೋನ್‍ನಲ್ಲಿ ಪಾಲ್ಗೊಳ್ಳುತ್ತಿದೆ. ಪ್ರತಿ ಬ್ಯಾಚ್‍ನಲ್ಲಿ ತಲಾ6 ಹುಡುಗರು, ಇಬ್ಬರು ಹುಡುಗಿಯರು ಇರುವರು.24 ತಾಸುಗಳ ಸತತ ಚಟುವಟಿಕೆಯಿಂದ ಎರಡು ಹಂತಗಳಲ್ಲಿ ನಡೆಯುವ ಹ್ಯಾಕತ್ತೋನ್ ಮೂಲಕ ವಿಜೇತನ್ನು ಆಯ್ಕೆಮಾಡಲಾಗುವುದು. 24 ತಾಸುಗಳಲ್ಲಿ ಮಧ್ಯೆ ಕೊಂಚ ವಿಶ್ರಾಂತಿ ಪಡೆದು, ನಿದ್ದೆ ಬಿಟ್ಟು, ಪೆÇ್ರೀಗ್ರಾಮಿಂಗ್, ಕೋಡಿರ್ಂಗ್ ಸಹಿತ ತಂತ್ರಜ್ಞಾನ ಬಳಸಿ ಪರಿಹಾರಕಂಡು ಕೊಳ್ಳಲಾಗುವುದು. ಇಲ್ಲಿ ಆಯ್ಕೆ ಮಾಡುವ 15 ಬ್ಯಾಚ್ ಗಳು ಮತ್ತೆ 12 ತಾಸುಗಳ ಅವಧಿಯಲ್ಲಿ ಹ್ಯಾಕತ್ತೋನ್ ನಲ್ಲಿ ಭಾಗವಹಿಸಲಿದೆ. ಈ ಮೂಲಕ ಯಥಾಪ್ರಕಾರ ಪ್ರಥಮ, ದ್ವಿತೀಯ, ತೃತೀಯ ಸ್ಥಾನಕ್ಕಾಗಿ ವಿಜೇತರನ್ನು ಆರಿಸಲಾಗುವುದು. ಪ್ರಥಮ ಬಹುಮಾನರೂಪದಲ್ಲಿ 50 ಸಾವಿರ ರೂ., ದ್ವಿತೀಯ ಬಹುಮಾನ 30 ಸಾವಿರ ರೂ., ತೃತೀಯ ಬಹುಮಾನ 20ಸಾವಿರ ರೂ. ಇರುವುದು.ಉನ್ನತ ಶಿಕ್ಷಣ-ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ 18 ಮಂದಿ ಇರುವ ಪರಿಣತರ ತಂಡ ಹ್ಯಾಕತ್ತೋನ್ ನಚಟುವಟಿಕೆಗಳ ಮೇಲ್ನೋಟ ವಹಿಸಿ ವಿಜೇತರನ್ನು ಆಯ್ಕೆಮಾಡಲಿದೆ. ಈಗಾಗಲೇರಾಜ್ಯದಲ್ಲಿ ಮೂರು ಹ್ಯಾಕತ್ತೋನ್ ಗಳು ಯಶಶ್ವಿಯಾಗಿನಡೆದಿವೆ. ಕೋಯಿಕೋಡ್ ನಲ್ಲಿ ನಡೆದ ಹ್ಯಾಕತ್ತೋನ್ ನಲ್ಲಿ ಸಾರಿಗೆ, ಮಲಪ್ಪುರಂ ನಲ್ಲಿ ನಡೆದ ಹ್ಯಾಕತ್ತೋನ್ ನಲ್ಲಿಶಿಕ್ಷಣ, ತಿರುªನಂತಪುರಂನಲ್ಲಿ ನಡೆದ ಹ್ಯಾಕತ್ತೋನ್ನಲ್ಲಿ ಗೃಹ ಎಂಬ ವಿಷಯಗಳಲ್ಲಿ ನಡೆದಿದ್ದುವು. ಮಾರ್ಚ್ 8ರ ವರೆಗೆ ಹ್ಯಾಕತ್ತೋನ್ ನಡೆಯಲಿದೆ.





