HEALTH TIPS

ಮೋದಿ ಹೇಳಿದ್ದೇನು, ಜನ ಮಾಡಿದ್ದೇನು? ವಿದ್ಯಾವಂತ ನಾಗರೀಕರಿಗೆ ಬುದ್ಧಿ ಬೇಡ್ವಾ?

 
      ಬೆಂಗಳೂರು: ಜಾಗತಿಕವಾಗಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಸೋಂಕನ್ನು ಭಾರತದಲ್ಲಿ ತಡೆಗಟ್ಟಲು ಪ್ರಧಾನಿ ಮೋದಿ ನಿನ್ನೆ (ಮಾರ್ಚ್ 22) ಜನತಾ ಕಫ್ರ್ಯೂಗೆ ಕರೆ ನೀಡಿದ್ದರು. ಜೊತೆಗೆ ಸಂಜೆ 5 ಗಂಟೆಗೆ ಮನೆಯಲ್ಲೇ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆಯವರಿಗೆ ಗೌರವ ಸಲ್ಲಿಸಿ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು, ನಿನ್ನೆ ಭಾರತದ ಮೂಲೆ ಮೂಲೆಯಲ್ಲೂ ಜನತಾ ಕಫ್ರ್ಯೂ ಆಚರಣೆ ಮಾಡಲಾಯಿತು. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಎಲ್ಲಾ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ಜನತಾ ಕಫ್ರ್ಯೂ ಪ್ರಯುಕ್ತ ಬಹುತೇಕರು ಮನೆಯಿಂದ ಹೊರಗೆ ಕಾಲಿಡಲಿಲ್ಲ.
      ಆದ್ರೆ, ಅದ್ಯಾವಾಗ 5 ಗಂಟೆ ಆಯ್ತೋ... ಸಂಪೂರ್ಣ ಚಿತ್ರಣವೇ ಬದಲಾಗಿ ಹೋಯ್ತು. ಬೆಳಗ್ಗೆಯಿಂದ ಮನೆಯೊಳಗೆ ಕೂತಿದ್ದ ಜನ, ಚಪ್ಪಾಳೆ ತಟ್ಟಲು, ಗಂಟೆ ಬಾರಿಸುವ ನೆಪದಲ್ಲಿ ಬೀದಿಗಿಳಿದರು. ತಟ್ಟೆ, ಜಾಗಟೆ, ಗಂಟೆಯನ್ನ ಬಾರಿಸುತ್ತಾ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.
     ಅಸಲಿಗೆ, ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಎಲ್ಲರೂ ಮನೆಯಲ್ಲೇ ಇರಲು 'ಜನತಾ ಕಫ್ರ್ಯೂ' ಆಚರಿಸಲಾಗಿತ್ತು. ಆದ್ರೆ, ಚಪ್ಪಾಳೆ ಹೊಡೆಯುವ ನೆಪದಲ್ಲಿ ವಿದ್ಯಾವಂತ ನಾಗರೀಕರು 'ಜನತಾ ಕಫ್ರ್ಯೂ'ದ ಮೂಲ ಉದ್ದೇಶವನ್ನೇ ಮರೆತಿದ್ದು ಮಾತ್ರ ನಾಚಿಕೆಗೇಡು.
     ಇಂತಹ ಪೆದ್ದುತನಕ್ಕೆ ಮದ್ದು ಎಲ್ಲಿಂದ ತರೋದು.? :
   ಚಪ್ಪಾಳೆ ತಟ್ಟುತ್ತ ಮೆರವಣಿಗೆ ಮಾಡಿದ ಜನರ ವಿಡಿಯೋವನ್ನು ಶೇರ್ ಮಾಡಿಕೊಂಡು ''ಮುಟ್ಟುವುದರಿಂದ ಕೊರೊನಾ ವೈರಸ್ ಹಬ್ಬುತ್ತದೆ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇಂಥಾ ಪೆದ್ದುತನಕ್ಕೆ ಮದ್ದು ಎಲ್ಲಿಂದ ತರೋದು'' ಎಂದು ಬೇಸರ ವ್ಯಕ್ತಪಡಿಸಿ ನಟ ರವಿಶಂಕರ್ ಗೌಡ ಟ್ವೀಟ್ ಮಾಡಿದ್ದಾರೆ.
      ನೀರಿನಲ್ಲಿ ಹೋಮ ಮಾಡಿದ ಹಾಗಾಯ್ತು!:
    ''ವೈದ್ಯರು, ನರ್ಸ್ ಮತ್ತು ಪೆÇಲೀಸರ ಶ್ರಮವನ್ನು ಇವರೆಲ್ಲ ಸೇರಿ ನೀರಿನಲ್ಲಿ ಹೋಮ ಮಾಡಿದ ಹಾಗೆ ಮಾಡಿಬಿಟ್ಟರು'' ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
      ಮರೆತು ಹೋಯ್ತಾ ಮುನ್ನೆಚ್ಚರಿಕೆ ಕ್ರಮಗಳು?:
     ವೈದ್ಯಕೀಯ ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಲು ಗುಂಪು ಕಟ್ಟಿಕೊಂಡು ಚಪ್ಪಾಳೆ ತಟ್ಟಿಬಿಟ್ಟರೆ ಸಾಲದು.. ಅವರೆಲ್ಲರಿಗೂ ಗೌರವ ಕೊಡಬೇಕು ಅಂದ್ರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
      ಇಂಥವರಿಗೆ ಏನು ಹೇಳೋಣ?:
     ನಾವೇನು ಮಾಡ್ತಿದ್ದೇವೆ ಎಂಬ ಜ್ಞಾನ ಇವರೆಲ್ಲರಿಗೂ ಇದ್ಯೋ, ಇಲ್ವೋ ಎಂಬ ಡೌಟ್ ಹಲವರಿಗೆ ಕಾಡುತ್ತಿದೆ. ಕೊರೊನಾ ನ 'ಸಂಭ್ರಮ' ಮಾಡಿಕೊಂಡಿರುವ ಇವರಿಗೆ ಏನ್ನನ್ನಬೇಕು ನೀವೇ ಹೇಳಿ..
      ಬೆಳಗ್ಗೆ ಕಫ್ರ್ಯೂ, ಸಂಜೆ ಸಂಭ್ರಮಾಚರಣೆ:
     5 ಗಂಟೆಗೆ 5 ನಿಮಿಷ ಚಪ್ಪಾಳೆ ತಟ್ಟಿ ಅಂದ್ರೆ, ಇವರೆಲ್ಲ ಸೇರಿಕೊಂಡು ಏನು ಮಾಡ್ತಿದ್ದಾರೆ ಅಂತ ನೀವೇ ನೋಡಿ.. ಬೆಳಗ್ಗೆಯಿಂದ ಜನತಾ ಕಫ್ರ್ಯೂ ಆಚರಿಸಿದ ಜನ ಸಂಜೆ ಸಂಭ್ರಮಾಚರಣೆ ಮಾಡಿಬಿಟ್ಟಿದ್ದರು.
   Idrees Yafai @askidrees1 The efforts of all the doctors, nurses, cops and public health officials down the drain because of these morons #ClapAt5pm #Dandiya #COVIDー19 3 03:17 ಪೂರ್ವಾಹ್ನ - ಮಾರ್ಚ್ 23,2020 Twitter ಜಾಹೀರಾತುಗಳ ಮಾಹಿತಿ ಮತ್ತು ಗೌಪ್ಯತೆ Idrees Yafai ಅವರ ಇತರ ಟ್ವೀಟ್‌ಗಳನ್ನು ನೋಡಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries