HEALTH TIPS

ದೆಹಲಿ ಗಲಭೆಗಳಲ್ಲಿ ಪಾಕಿಸ್ತಾನ ಕೈವಾಡ; ಭದ್ರತಾ ಸಂಸ್ಥೆಗಳ ತನಿಖೆಯಲ್ಲಿ ಬಹಿರಂಗ

     
       ನವದೆಹಲಿ: ದೆಹಲಿ ಗಲಭೆಗಳ ಸಂದರ್ಭದಲ್ಲಿ ನೆರೆಯ ಪಾಕಿಸ್ತಾನದಿಂದ 1,000ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಪ್ರಚೋದನಕಾರಿ ಪೆÇೀಸ್ಟ್ ಗಳನ್ನು ಮಾಡಲಾಗಿತ್ತು ಎಂಬ ಅಂಶವನ್ನು ಭದ್ರತಾ ಸಂಸ್ಥೆಗಳ ತನಿಖೆಯಲ್ಲಿ   ಬಹಿರಂಗಗೊಂಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್, ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ನಗರಗಳಿಂದ ಗಲಭೆಗಳನ್ನು ಪ್ರಚೋದಿಸುವಂತಹ ಪೆÇೀಸ್ಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.
     ದ್ವೇಷ ಪೂರಿತ ಸೋಷಿಯಲ್ ಮೀಡಿಯಾ ಪೆÇೀಸ್ಟ್ ಗಳನ್ನು ದೆಹಲಿ ಗಲಭೆಗಳು 2020, ದೆಹಲಿ ಬನಿರ್ಂಗ್,  ಶೇಮ್ ಆನ್ ಡೆಲ್ಲಿ ಪೆÇಲೀಸ್, ದೆಹಲಿ ಪೆÇಲೀಸ್ ಟ್ರೋತ್,  ದೆಹಲಿ ಪೆÇಲೀಸ್ ಮರ್ಡರರ್ಸ್ ಹ್ಯಾಷ್ ಟ್ಯಾಗ್ ಮೂಲಕ ಫೆಬ್ರವರಿ 25 ರಿಂದ ಮಾರ್ಚ್ 3ರವರೆಗೂ ಪಾಕಿಸ್ತಾನ ನಗರಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದುಬಂದಿವೆ ಎಂದು  ಭದ್ರತಾ ಸಂಸ್ಥೆಗಳು ತಿಳಿಸಿವೆ. ಗಲಭೆಯ ಸಂದರ್ಭದಲ್ಲಿ ಪೆÇೀಸ್ಟ್ ಮಾಡಿದ 70 ಪಾಕಿಸ್ತಾನದ  ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತೀಯ ಭದ್ರತಾ ಪಡೆಗಳು ಗುರುತಿಸಿವೆ. ದೆಹಲಿ ಗಲಭೆಯ ಸಂದರ್ಭದಲ್ಲಿ ಮಾಡಿದ ಕೆಲವು ಟ್ವೀಟ್ ಗಳನ್ನು ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯಿಂದ  ಪೆÇೀಸ್ಟ್  ಮಾಡಲಾಗಿದೆ  ಎಂಬುದು  ಭದ್ರತಾ ಸಂಸ್ಥೆಗಳ  ತನಿಖೆ ಬಹಿರಂಗಗೊಂಡಿದೆ.
     ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಜನರು ಸಾವನ್ನಪ್ಪಿ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.  ದೆಹಲಿ  ಹಿಂಸಾಚಾರದಲ್ಲಿ ಪಾಕಿಸ್ತಾನ ಭಾಗಿಯಾಗಿರುವ ವಿಷಯದ ಬಗ್ಗೆ ಭದ್ರತಾ ಸಂಸ್ಥೆಗಳು  ತನಿಖೆ ನಡೆಸುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries