ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಹೇಳಿದಂತೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಾಮಾಜಿಕ ಜಾಲತಾಣಗಳಿಂದ ತಾತ್ಕಾಲಿಕವಾಗಿ ದೂರ ಉಳಿದಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಗೈದ ಮಹಿಳಾ ಮಣಿಯರಿಗೆ ತಮ್ಮ ಟ್ವಿಟರ್ ಖಾತೆಯ ನಿರ್ವಹಣೆ ಬಿಟ್ಟುಕೊಟ್ಟಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ದೇಶದ ಎಲ್ಲ ಮಹಿಳೆಯರಿಗೆ ಶುಭ ಕೋರಿದ್ದು, ಈ ಹಿಂದಿನ ತಮ್ಮ ಮಾತನ್ನು ನೆನಪು ಮಾಡಿಕೊಳ್ಳುತ್ತಾ, ನಾನು ಸಾಮಾಜಿಕ ಜಾಲತಾಣಗಳ ದೂರ ಉಳಿಯುತ್ತಿದ್ದೇನೆ. ನನ್ನ ಟ್ವಿಟರ್ ಖಾತೆಯ ನಿರ್ವಹಣೆಯನ್ನು ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಗೈದ ಮಹಿಳಾ ಮಣಿಯರಿಗೆ ಬಿಟ್ಟುಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಇಂದಿನ ಮಟ್ಟಿಗೆ ತಮಿಳುನಾಡು ಮೂಲದ ಮಾಳವಿಕ ಅಯ್ಯರ್ ಅವರು ನಿರ್ವಹಣೆ ಮಾಡುತ್ತಿದ್ದಾರೆ. ಎರಡು ಕೈಗಳು ಇಲ್ಲದಿದ್ದರೂ ಪಿ.ಹೆಚ್.ಡಿ ಮಾಡಿದ ಅಪರೂಪದ ಛಲಗಾತಿಯಾಗಿದ್ದಾರೆ.
Greetings on International Women’s Day! We salute the spirit and accomplishments of our Nari Shakti.
As I’d said a few days ago, I’m signing off. Through the day, seven women achievers will share their life journeys and perhaps interact with you through my social media accounts.
10.6K people are talking about this



