ಪತ್ತನಂತಿಟ್ಟು: ಶಬರಿಮಲೆ ಅಸ್ತಿತ್ವದಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿ ಐದು ಮಂದಿಗೆ ಕರೊನಾ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ವೈರಸ್ ಬಾಧಿತರು ಹಾಗೂ ಇವರೊಂದಿಗೆ ವ್ಯವಹಾರ ನಡೆಸಿದವರು ಶಬರಿಮಲೆ ಯಾತ್ರೆ ಕೈಬಿಡುವಂತೆ ರಾಜ್ಯ ದೇವಸ್ವಂ ಬೋರ್ಡ್ ಸೂಚಿಸಿದೆ.
ಶಬರಿಮಲೆಯಲ್ಲಿ ಮೀನಮಾಸದ ಪೂಜೆಗಾಗಿ ಮಾರ್ಚ್ 13ರಂದು ಗಭಧಗುಡಿ ಬಾಗಿಲು ತೆರೆಯಲಿದ್ದು, 18ರಂದು ಮತ್ತೆ ಮುಚ್ಚಲಾಗುವುದು. ಭಾನುವಾರ ಜಿಲ್ಲೆಯ ಐದು ಮಂದಿಗೆ ಕರೊನಾ ಬಾಧಿಸಿರುವುದು ಖಚಿತಗೊಂಡಿದ್ದು, ಇದರಲ್ಲಿ ಮೂವರು ಇಟೆಲಿಯಿಂದ ಆಗಮಿಸಿದವರಾಗಿದ್ದು, ಇವರು ತಂಗಿದ್ದ ಮನೆಯವರಿಗೂ ವೈರಸ್ ವ್ಯಾಪಿಸಿರುವುದಾಗಿ ಆರೋಗ್ಯ ಖಾತೆ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ.

