HEALTH TIPS

ಸ್ನೇಹಲತಾ ದಿವಾಕರ್ ಅವರ ಮಗ್ಗ ಕಥಾ ಸಂಕಲನ ಬಿಡುಗಡೆ-ಭಾವಾದ್ರ್ರ ಶೈಲಿ-ಕಟು ವಾಸ್ತವಗಳ ಹೂರಣ ಬೆರಗುಗೊಳಿಸುತ್ತದೆ-ಡಾ.ಯು.ಮಹೇಶ್ವರಿ


         ಕುಂಬಳೆ: ಸಾಹಿತ್ಯ ಬರಹಗಾರ ಎಂದಿಗೂ ಭಿನ್ನ ವ್ಯಕ್ತಿತ್ವದವನಾಗಿದ್ದು ಸಂಕೀರ್ಣತೆಯನ್ನು ಅನುಭವಿಸುವ ಗುಣ ಹೊಂದಿದವರಾಗಿರುತ್ತಾರೆ. ಬದುಕಿನ ಅನುಭವಗಳನ್ನು ಕಥೆಯಾಗಿ ಕಟ್ಟಿಕೊಡುವ ವಿಶೇಷ ಸಾಮಥ್ರ್ಯ ಯಶಸ್ವಿ ಕಥೆಗಾರರ ಹಿರಿಮೆಯಾಗಿದ್ದು, ಸನ್ನಿವೇಶಗಳ ಪುನರ್ ನಿರ್ಮಾಣ ಕಥಾ ಸಾಹಿತ್ಯವನ್ನು ಮೇರುತ್ವಕ್ಕೆ ಕೊಂಡೊಯ್ಯುತ್ತದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಅವರು ತಿಳಿಸಿದರು.
          ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ  ಕಥೆಗಾರ್ತಿ ಸ್ನೇಹಲತಾ ದಿವಾಕರ್ ಅವರ ಚೊಚ್ಚಲ ಕಥಾ ಸಂಕಲನ ಮಗ್ಗ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯ ನೀಡಿ ಅವರು ಮಾತನಾಡಿದರು.
         ಕಥೆಗಳಲ್ಲಿ ನಿತ್ಯ ಜೀವನದ ಆಗುಹೋಗುಗಳು, ವರ್ತಮಾನದ ಪರಿಸರ, ಅನುಭವಗಳನ್ನು ನೈಜತೆಯ ಕಣ್ಣುಗಳಿಂದ ಪರಿಭಾವಿಸಿ ಬೆಚ್ಚಿ ಬೀಳಿಸುವ ಸತ್ಯಗಳನ್ನು ಅಕ್ಷರ ರೂಪದಲ್ಲಿ ಪೋಣಿಸುವ ಕುಶಲತೆ ಓದುಗರನ್ನು ಹಿಡಿದಿಡುತ್ತದೆ. ಸ್ನೇಹಲತಾ ದಿವಾಕರ್ ಅವರ ಕಥೆಗಳು ಇಂತಹ ಶಕ್ತಿಯನ್ನು ಹೊಂದಿದ್ದು, ಅಖಿಲ ಕರ್ನಾಟಕ ಮಟ್ಟದಲ್ಲಿ ಗುರುತಿಸುವ ಕಥೆಗಾರ್ತಿಯಾಗಿರುವುದು ಕಾಸರಗೋಡಿನ ಕನ್ನಡ ಭಾಷಾ ಲೋಕಕ್ಕೆ ಹೆಮ್ಮೆ ತಂದಿದೆ ಎಂದು ಅವರು ಈ ಸಂದರ್ಭ ವಿಶ್ಲೇಶಿಸಿದರು.
        ಕೃತಿಯನ್ನು ಬಿಡುಗಡೆಗೊಳಿಸಿದ ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಅವರು ಮಾತನಾಡಿ ಕಥನ ಕೌಶಲ್ಯ ಎನ್ನುವುದು ವಿಶಿಷ್ಟ ಶಕ್ತಿಯಾಗಿದ್ದು, ಭೂತ-ವರ್ತಮಾನ ಹಾಗೂ ಭವಿಷ್ಯದ ಪೂರ್ವಾಪರಗಳ ಅವಲೋಕನಕಾರರಾಗಿ ಗುರುತಿಸಲ್ಪಡುತ್ತಾರೆ. ಸಂಕಲನದ ಮೊದಲ ಕಥೆ ಹಸಿವು ಕಥೆಗಾರ್ತಿಯ ಚೊಚ್ಚಲತೆಯಾಗಿದ್ದು, ಬದುಕಿನ ಕಟುವಾಸ್ತವ, ಬೆಚ್ಚಿಬೀಳಿಸುವ ಸತ್ಯವನ್ನು ಭಾವಾದ್ರ್ರ ಶೈಲಿಯಲ್ಲಿ ನಿರೂಪಿಸಿ ಗಮನ ಸೆಳೆದಿದ್ದಾರೆ. ಬದುಕಿನಲ್ಲಿ ಕಂಡುಂಡ ಅನುಭವಗಳು ಕಥೆಗಾರ್ತಿಯ ಪ್ರಗತಿಶೀಲ ಮತ್ತು ಬಂಡಾಯದ ಆಶಯಗಳಿಗೆ ತುಡಿಯುವಂತೆ ಮಾಡಿದ್ದಲ್ಲಿ ಆಶ್ಚರ್ಯವಿಲ್ಲ. ಬಹುಭಾಷೆ ಮತ್ತು ವಿವಿಧ ಸಮುದಾಯಗಳ ಕಾಸರಗೋಡಿನ ವಿಶಿಷ್ಟ ಬದುಕಿನ ವರ್ಣಗಳು ಕಥೆಗಳಲ್ಲಿ ಸಾಂಧರ್ಭಿಕವಾಗಿ ಮೂಡಿಬಂದಿದೆ. ಕಾಸರಗೋಡಿನ ವೃತ್ತಿ ಸಂಬಂಧಿ ಪಾರಿಭಾಷಿಕ ಪದಗಳು, ಹಬ್ಬ ಆಚರಣೆಗಳ ಪ್ರಸ್ತಾಪಗಳೂ, ಸಾಮುದಾಯಿಕ, ಸಾಂಸ್ಕøತಿಕ, ರಾಜಕೀಯ ವಿಚಾರಗಳು ಸಹಜ ಪರಿಸರವನ್ನು ಓದುಗರಿಗೆ ಮುಟ್ಟಿಸುತ್ತದೆ ಎಂದು ಅವರು ತಿಳಿಸಿದರು.
        ಬೆಂಗಳೂರು ಸಿರಿವರ ಪ್ರಕಾಶನದ ಸಿರಿವರ ರವೀಂದ್ರನಾಥ್, ಮಂಗಳೂರು ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದು ಶುಭಹಾರೈಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ, ಪ್ರೊ.ಎ.ಶ್ರೀನಾಥ್, ಪತ್ರಕರ್ತ ಮಲಾರ್ ಜಯರಾಮ ರೈ, ಕಾರ್ಟೂನ್ ಕಲಾವಿದ ವೆಂಕಟ್ ಭಟ್ ಎಡನೀರು, ಕವಿ ಶ್ರೀಕೃಷ್ಣಯ್ಯ ಅನಂತಪುರ, ಲೇಖಕಿ ಕೃಷ್ಣವೇಣಿ ಕಿದೂರು, ಕಣಿಪುರ ಮಾಸಪತ್ರಿಕೆಯ ಎಂ.ನಾ.ಚಂಬಲ್ತಿಮಾರ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸ್ನೇಹಲತಾ ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ದಿವಾಕರ್ ನಾಯ್ಕಾಪು ಸಹಕರಿಸಿದರು. ರೇಷ್ಮಾ ಸುನಿಲ್ ಪ್ರಾರ್ಥನಾಗೀತೆ ಹಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries