ಕುಂಬಳೆ: ಅನಂತಪುರ ಸರೋವರ ಕ್ಷೇತ್ರ ಪರಿಸರದಲ್ಲಿ ಏ.10 ರಿಂದ 12ರ ವರೆಗೆ ನಡೆಯಲಿರುವ ಕನ್ನಡ ಸಿರಿ ಸಮ್ಮೇಳನನ ಅನಂತಪುರ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಪೂರ್ವಭಾವೀ ಸಭೆ ಶನಿವಾರ ಸಂಜೆ ಅನಂತಪುರ ಶ್ರೀಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು. À
ಸಭೆಯಲ್ಲಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ಮಾಧವ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸಮಾರಂಭದ ರೂಪುರೇಖೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಗೋಪಾಲಕೃಷ್ಣ ಪೆರ್ಣೆ, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಸತ್ಯಶಂಕರ ಅನಂತಪುರ, ರತ್ನಾಕರ ಅನಂತಪುರ, ಜಯಲಕ್ಷ್ಮೀ ಕಾರಂತ, ವಿನೋದ, ಪ್ರೇಮಲತ ಗೋಕುಲದಾಸ್ ಮೊದಲಾದವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಮೂರು ದಿನಗಳ ಕಾಲ ನಡೆಯಲಿರುವ ಸಿರಿ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಸಂಪೂರ್ಣ ಬೆಂಬಲ ನೀಡುವುದರೊಂದಿಗೆ ವ್ಯವಸ್ಥೆಗಳ ಸಮರ್ಥ ನಿಭಾವಣೆಗೆ ಯೋಜನೆ ರೂಪಿಸಲಾಯಿತು.
ಸಿರಿ ಸಮ್ಮೇಳನದ ಮಹಿಳಾ ಸಮಿತಿ ಸಂಚಾಲಕಿ ಸುಜಾತ ಸ್ವಾಗತಿಸಿ, ಗೋಪಾಲಕೃಷ್ಣ ಪೆರ್ಣೆ ವಂದಿಸಿದರು.


