ಕಾಸರಗೋಡು: ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ವಿಜಯಮಂತ್ರ ಹೇಳಿಕೊಡುವಲ್ಲಿ ಜಿಲ್ಲಾಧಿಕಾರಿ ಹರಿಕಾರರಾಗಿದ್ದಾರೆ.
ಜಿಲ್ಲೆಯ ಮಾದರಿ ವಸತಿ ಶಾಲೆಗಳು ಇದಕ್ಕೆ ವೇದಿಕೆಯಾಗಿವೆ. ಪರೀಕ್ಷೆಯ ಭೀತಿ ತೊಲಗಿಸಿ, ಅತ್ಯುತ್ತಮ ಅಂಕ ಪಡೆಯುವಲ್ಲಿ ಮನೋಭೂಮಿಕೆ ಸಿದ್ಧಪಡಿಸುವಲ್ಲಿ ನಡೆಸಬೇಕಾದ ಕ್ರಮಗಳನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಮ್ಮ ಅನುಭವಗಳ ಸಹಿತ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ.
ಸಾರ್ವಜನಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆಯುತ್ತಲೇ ಬಂದಿರುವ ಪರವನಡ್ಕ ಎಂ.ಆರ್.ಎಸ್. ನ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ„ಕಾರಿ ಸಂವಾದ ನಡೆಸಿದರು. ತಮಗೆ ಕಷ್ಟಕರವಾಗಿರುವ ಪ್ರತಿ ವಿಷಯದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ಬಳಿ ಚರ್ಚೆ ನಡೆಸಿದ ಜಿಲ್ಲಾ„ಕಾರಿ ಅದರ ಪರಿಹಾರವನ್ನೂ ತಿಳಿಸಿಕೊಟ್ಟರು. ವಿವಿಧ ಗುಂಪುಗಳಾಗಿ ವಿದ್ಯಾರ್ಥಿಗಳನ್ನು ವಿಂಗಡಿಸಿ ಆ ಮೂಲಕವೂ ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ತಂತ್ರವನ್ನು ಬಳಸಲಾಯಿತು. ಮುಂದಿನ ದಿನಗಳಲ್ಲಿ ಶಾಲೆಯ ಸ್ಪೆಷ್ಯಲ್ ಕ್ಲಾಸ್‍ಗಳಲ್ಲದೆ, ಪ್ರತ್ಯೇಕ ಕೋಚಿಂಗ್ ನೀಡುವಂತೆ ಶಿಕ್ಷಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ವೆಳ್ಳಚ್ಚಾಲ್ ಮಾದರಿ ವಸತಿ ಶಾಲೆಗೂ ಜಿಲ್ಲಾ„ಕಾರಿ ಸಂದರ್ಶನ ನಡೆಸಿದರು. ಪರಿಶಿಷ್ಟ ಜಾತಿ ಜಿಲ್ಲಾ ಅಭಿವೃದ್ಧಿ ಅ„ಕಾರಿ ಎಸ್.ಮೀನಾರಾಣಿ ಜೊತೆಗಿದ್ದರು.
* ಆಕರ್ಷಕ ಬಹುಮಾನಗಳ ಘೋಷಣೆ : ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಪರವನಡ್ಕ ಎಂ.ಆರ್.ಎಸ್.ನಲ್ಲಿ ಎಲ್ಲ ವಿಷಯಗಳಲ್ಲಿ `ಎ'ಪ್ಲಸ್ ಪಡೆಯುವವರಿಗೆ ಜಿಲ್ಲಾಡಳಿತೆ ವತಿಯಿಂದ ಪ್ರವಾಸಕ್ಕೆ ವ್ಯವಸ್ಥೆ ಒದಗಿಸುವುದಾಗಿ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಘೋಷಿಸಿದರು.
ಇದೇ ಫಲಿತಾಂಶ ಗಳಿಸುವವರಿಗೆ ಅರ್ಧ ಪವನ್ ಬಂಗಾರ ಬಹುಮಾನ ರೂಪದಲ್ಲಿ ನೀಡುವುದಾಗಿ ಜಿಲ್ಲಾ„ಕಾರಿ ಅವರ ಜತೆಗಿದ್ದ ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅ„ಕಾರಿ ಪಿ.ಟಿ.ಅನಂತಕೃಷ್ಣನ್ ಈ ವೇಳೆ ಘೋಷಿಸಿದರು. ಈ ಬಹುಮಾನ ಘೋಷಣೆಗಳನ್ನು ವಿದ್ಯಾರ್ಥಿಗಳು ಭರ್ಜರಿ ಕರತಾಡನಗಳೊಂದಿಗೆ ಸ್ವಾಗತಿಸಿದರು.




