HEALTH TIPS

ಭಾರತ ಎಲ್ಲರಿಗಿಂತ ಆಧುನಿಕವಾಗಿದೆ: ಭಾರತದ ಸಂಸ್ಕøತಿಯ ಪ್ರಭಾವ ಒಪ್ಪಿ ನಮಸ್ಕರಿಸಿದ ಟ್ರಂಪ್!

 
           ವಾಷಿಂಗ್ ಟನ್: ಕೊರೋನಾ ವೈರಸ್ ಗೆ ಅಮೆರಿಕ ಸಹ ನಲುಗಿದ್ದು, ವೈರಸ್ ಹರಡದಂತೆ ತಡೆಟ್ಟಲು ವಿಶ್ವವೇ ಹರಸಾಹಸಪಡುತ್ತಿದೆ.
  ಈ ನಡುವೆ ಕೊರೋನಾ ವೈರಸ್ ಹರಡುವಿಕೆ ತಡೆಗೆ ಭಾರತೀಯ ಸಂಸ್ಕೃತಿ ವಿಶ್ವಾದ್ಯಂತ ಜನಪ್ರಿಯವಾಗುತ್ತಿದೆ. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಒಬ್ಬರನ್ನು ಭೇಟಿ ಮಾಡಿದಾಗ ಕೈಕುಲುಕಿ ಕುಶಲೋಪರಿ ಕೇಳುವುದು ಸಹಜ. ಈ ರೀತಿ ಮಾಡುವುದರಿಂದ ಕೊರೋನಾ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು. ಆದರೆ ಭಾರತದಲ್ಲಿ ನಮಸ್ಕಾರ ಮಾಡುವ ಪದ್ಧತಿ ಇದ್ದು, ವಿಶ್ವವೇ ಈ ಸಂಸ್ಕೃತಿಯನ್ನು ಅನುಕರಣೆ ಮಾಡಲು ನಿಂತಿದೆ.
          ಇದಕ್ಕೆ ಸಾಕ್ಷಿಯಾಗಿ ಅಮೆರಿಕಕ್ಕೆ ಭೇಟಿ ನೀಡಿರುವ ಐರಿಷ್ ಪ್ರಧಾನಮಂತ್ರಿ ಲಿಯೋ ವರದಕರ್ ಅವರನ್ನು ಶ್ವೇತಭವನದಲ್ಲಿ ಸ್ವಾಗತಿಸಿದ ಟ್ರಂಪ್, ಕೈ ಮುಗಿದು ಶುಭ ಕೋರಿದರು. ಇಬ್ಬರೂ ನಾಯಕರು ಪರಸ್ಪರ ಕೈಮುಗಿದು ಶುಭಕೋರಿದ ನಂತರ, ಕೈಕುಲುಕಿ ಸ್ವಾಗತಿಸುವುದರ ಬದಲು ಈ ರೀತಿ ಕೈ ಜೋಡಿಸಿ ಸ್ವಾಗತಿಸುವುದು ಕೊರೋನಾ ವಿರುದ್ಧ ಹೋರಾಡಲು ಇರುವ ಪ್ರಾಥಮಿಕ ಅಸ್ತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.
       ಈ ವೇಳೆ ಮಾತನಾಡಿದ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ನಾನು ಇತ್ತಿಚಿಗಷ್ಟೇ ಭಾರತದಿಂದ ವಾಪಸ್ಸಾದ ನಂತರ ನನ್ನ ಮೇಲೆ ಭಾರತೀಯ ಸಂಸ್ಕೃತಿ ಗಾಢವಾದ ಪ್ರಭಾವ ಬೀರಿದೆ. ಭಾರತ ಪ್ರವಾಸದಲ್ಲಿದ್ದಾಗ ಅಲ್ಲಿನ ಪ್ರಧಾನಿಯೂ ಸೇರಿಂದತೆ ಎಲ್ಲರೂ ತಮ್ಮನ್ನು ನಮಸ್ತೆ ಮೂಲಕವೇ ಸ್ವಾಗತಿಸಿದರು. ನಮಸ್ತೆಯ ಮಹತ್ವ ಭಾರತದ ಪ್ರವಾಸದ ಬಳಿಕಷ್ಟೇ ಅರ್ಥವಾಯಿತು, ಭಾರತ ಎಲ್ಲರಿಗಿಂತ ಆಧುನಿಕವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries