HEALTH TIPS

ಕೊರೋನಾ ವೈರಸ್ ಹೆಡೆಮುರಿ ಕಟ್ಟಲು ಶ್ರೀಲಂಕಾ ಪಣ: ದೇಶಾದ್ಯಂತ ಕಫ್ರ್ಯೂ ಹೇರಿಕೆ

   
        ಕೊಲಂಬೋ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಹೆಡೆಮುರಿ ಕಟ್ಟಲು ಪಣತೊಟ್ಟಿ ನಿಂತಿರುವ ಶ್ರೀಲಂಕಾ ಸರ್ಕಾರ ಶುಕ್ರವಾರದಿಂದಲೇ ದೇಶಾದ್ಯಂತ ಕಫ್ರ್ಯೂ ಹೇರಿಕೆ ಮಾಡಿದೆ.
         ಶ್ರೀಲಂಕಾದಲ್ಲಿ ಶುಕ್ರವಾರ ಒಂದೇ ದಿನ ಲಂಕಾದಲ್ಲಿ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ವರೆಗೂ 65 ಮಂದಿಯಲ್ಲಿ ಕೋವಿದ್ 19 ಅಥವಾ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಅಂತೆಯೇ ಶಂಕಿತ ಸೋಂಕಿತರ ಸಂಖ್ಯೆ 218ಕ್ಕೆ ಏರಿಕೆಯಾಗಿದೆ. ಇದಲ್ಲದೇ ಲಂಕಾದಲ್ಲಿ ಈವರೆಗೂ 27 ವಿದೇಶಿಗರು ಸೇರಿದಂತೆ ಒಟ್ಟು 2400 ಮಂದಿಯನ್ನು ವಿವಿಧ ಆಸ್ಪತ್ರೆ ಮತ್ತು ಪ್ರದೇಶಗಳಲ್ಲಿ ನಿಬರ್ಂಧಕ್ಕೊಳಪಡಿಸಲಾಗಿದೆ. ಇದೇ ಕಾರಣಕ್ಕೆ ಶ್ರೀಲಂಕಾ ಸರ್ಕಾರ ತನ್ನ ದೇಶದಲ್ಲಿ ಕಠಿಣ ನಿಯಮ ಜಾರಿಗೆ ತಂದಿದೆ. ಇಂದಿನಿಂದ ಅಂದರೆ ಶುಕ್ರವಾರದಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಶ್ರೀಲಂಕಾ ಸರ್ಕಾರ ಕಫ್ರ್ಯೂ ಹೇರಿಕೆ ಮಾಡಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಓಡಾಡದಂತೆ ಮನವಿ ಮಾಡಿದೆ. ಅಲ್ಲದೆ ಲಂಕಾದಲ್ಲಿ ತುರ್ತು ಸೇವೆಗಳನ್ನು ಹೊರತು ಪಡಿಸಿ, ಉಳಿದೆಲ್ಲಾ ಸೇವೆಗಳನ್ನು ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ.
     ಜೊತೆಗೆ ಈಗಾಗಲೇ ಲಂಕಾ ಸರ್ಕಾರ ಎಲ್ಲ ರೀತಿಯ ವಿಮಾನಯಾನ ಸೇವೆಗಳನ್ನು ರದ್ದು ಮಾಡಿದ್ದು, ವಿಮಾನಯಾನ ಸೇವೆ ರದ್ಧತಿ ಮುಂದುವರೆಸಲಾಗಿದೆ. ಕೊರೋನಾ ವೈರಸ್ ಭೀತಿ ಭಾರತದಂತೆಯೇ ಶ್ರೀಲಂಕಾ ಷೇರುಮಾರುಕಟ್ಟೆ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಕೊಲಂಬೋ ಷೇರುಮಾರುಕಟ್ಟೆ ಬರೊಬ್ಬರಿ ಶೇ.5.33ರಷ್ಟು ಕುಸಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries