ಮಂಜೇಶ್ವರ: ಮಂಜೇಶ್ವರ ಹೊಸಂಗಡಿಯ ದುರ್ಗಿಪಳ್ಳದಲ್ಲಿ ನಿರ್ಮಿಸಿರುವ ಕೇರಳ ತುಳು ಅಕಾಡಮಿಯ ಕಾರ್ಯಾಲಯ ವಾಗಿರುವ ತುಳು ಭವನ ಉದ್ಘಾಟನೆ ಮಾರ್ಚ್ 15 ರಂದು ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಹೊಸಂಗಡಿಯಲ್ಲಿ ಗೇಟ್ ವೇ ಸಭಾಂಗಣದಲ್ಲಿ ಸ್ವಾಗತ ಸಮಿತಿ ರಚನಾ ಸಭೆ ನಡೆಯಿತು.
ಮಾಜಿ ಶಾಸಕ ಸಿ.ಎಚ್. ಕುಞ0ಬು ರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೇರಳ ತುಳು ಅಕಾಡಮಿ ಅಧ್ಯಕ್ಷ ಉಮೇಶ್ ಎಂ. ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಉಪಾಧ್ಯಕ್ಷೆ ಮಮತಾ ದಿವಾಕರ್, ಸದಸ್ಯ ಕೆ.ಆರ್. ಜಯಾನಂದ, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಜ್ ಹಾಜಿ, ಬಿ ಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ, ಹರಿಶ್ಚ0ದ್ರ ಮಂಜೇಶ್ವರ, ರಾಮಕೃಷ್ಣ ಕಡಂಬಾರ್, ಬಿ.ಎ.ಬಶೀರ್ ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚಿಸಲಾಯಿತು. ರಕ್ಷಾಧಿಕಾರಿಯಾಗಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ಸಿ. ಖಮರುದ್ದೀನ್, ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾದ್ ವರ್ಕಾಡಿ, ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಶಂಶಾದ್ ಶುಕೂರ್ ಮೀ0ಜ, ಅಬ್ದುಲ್ ಅಝೀಜ್ ಹಾಜಿ ಮಂಜೇಶ್ವರ, ಅಬ್ದುಲ್ ಮಜೀದ್ ವರ್ಕಾಡಿ, ಭಾರತಿ ಜೆ. ಶೆಟ್ಟಿ ಪೈವಳಿಕೆ, ಶಾಹುಲ್ ಹಮೀದ್ ಮಂಗಲ್ಪಾಡಿ, ಅರುಣಾ ಜೆ. ಪುತ್ತಿಗೆ, ಶಾರದಾ ವೈ ಎಣ್ಮಕಜೆ, ಪುಂಡರೀಕಾಕ್ಷ ಕೆ.ಎಲ್.ಕುಂಬಳೆ ಅವರನ್ನು ಆರಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ಸಿ.ಎಚ್.ಕುಞ0ಬು ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಮಮತಾ ದಿವಾಕರ್, ಸದಸ್ಯರಾದ ಕೆ.ಆರ್. ಜಯಾನಂದ, ಸದಾಶಿವ, ಗೋಪಾಲಕೃಷ್ಣ ಪಜ್ಜ, ಆಶಾಲತಾ ಬಿ.ಎಂ, ಬಿ.ವಿ.ರಾಜನ್, ಮಣಿಕಂಠ ರೈ, ಪ್ರಕಾಶ್ ನಾಯ್ಕ್, ಹರಿಶ್ಚ0ದ್ರ, ಬಶೀರ್ ಕನಿಲ, ಸದಾಶಿವ ವರ್ಕಾಡಿ, ಆಶಾಲತಾ ಬಿ.ಎಂ. ಚಂದ್ರಹಾಸ ಶೆಟ್ಟಿ, ಶೈಲಾ ಬಾಲಕೃಷ್ಣನ್, ಕನ್ವಿನರ್‍ರಾಗಿ ತುಳು ಅಕಾಡಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ, ಸಹ ಕನ್ವಿನರ್‍ರಾಗಿ ಕಮಲಾಕ್ಷ ಕನಿಲ, ಹರೀಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಗಂಗಾಧರ ದುರ್ಗಿಪಳ್ಳ ರವರನ್ನು ಆಯ್ಕೆ ಮಾಡಲಾಯಿತು.


