ಕುಂಬಳೆ: ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಪುರೋಹಿತ ಕೆ.ರಾಮಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಭಾನುವಾರ ಶ್ರೀಗುರುಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಅಂಕುರಪೂಜೆ, ನವಗ್ರಹ ಪೂಜೆ, ಮಹಾಗಣಪತಿ ಹೋಮ, ಅಧಿವಾಸ ಕ್ರಿಯಾದಿಗಳು ನಡೆದು ಬಳಿಕ 7.29 ರಿಂದ 9.37ರ ಮಧ್ಯೆ ಅಷ್ಟಬಂಧಪೂರ್ವಕ ಶ್ರೀಕಾಳಿಕಾಂಬಾ, ಶ್ರೀಮಹಾಗಣಪತಿ, ಶ್ರೀವಿಶ್ವಕರ್ಮ, ಶ್ರೀಕಾಲಬೈರವೇಶ್ವರ ದೇವರ ಬಿಂಬ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ನಾಡಿ ಸಂಧಾನಪೂರ್ವಕ ಜೀವಕುಂಭಾಭಿಷೇಕ, ಪ್ರಸನ್ನಪೂಜೆಗಳು ಜರಗಿದವು. ಬಳಿಕ ಭದ್ರದೀಪ ಪ್ರತಿಷ್ಠೆ, ಕವಾಟ ಬಂಧನ, ಯಾಗಮಂಟಪದಲ್ಲಿ ಶ್ರೀವಿಶ್ವಕರ್ಮ ಮಹಾಯಾಗ, ಮಹಾಪೂಜೆ, ಸಂಜೆ ಶ್ರೀಗುರುಮಹಾಗಣಪತಿ ಪೂಜೆ, ಅಂಕುರಪೂಜೆ, ನವಗ್ರಹ ಪೂಜೆ, ಶ್ರೀದುರ್ಗಾನಮಸ್ಕಾರ ಪೂಜೆ ಜರಗಿತು. ವಿವಿಧ ಭಜನಾ ತಂಡಗಳಿಂದ ಸಂಕೀರ್ತನೆ ಜರಗಿತು.
ವಿವಿಧೆಡೆಯ ಹಲವಾರು ಭಕ್ತ ಜನತೆ ಪಾಲ್ಗೊಂಡು ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಾರ್ಥರಾದರು.



