ಕಾಸರಗೋಡು: ಕಾಸರಗೋಡು ಅ¨ಭಿವೃದ್ಧಿ ಪ್ಯಾಕೇಜ್‍ನಲ್ಲಿ ಅಳವಡಿಸಿ ನಿರ್ಮಿಸಲಾದ ವಕಿರ್ಂಗ್ ವಿಮೆನ್ಸ್ ಹಾಸ್ಟೆಲ್ ಉದ್ಘಾಟನೆ ಮಾ.15ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಹಾಸ್ಟೆಲ್ ಉದ್ಘಾಟಿಸುವರು. ಈ ಸಂಸ್ಥೆಗೆ ಉದಯಗಿರಿ ವನಿತಾ ಹಾಸ್ಟೆಲ್ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅವಲೋಕನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಕಟ್ಟಡ ವಿಭಾಗ ಕಾರ್ಯಕಾರಿ ಇಂಜಿನಿಯರ್ ಕೆ.ದಯಾನಂದ, ಡಿ.ಡಿ.ಇ. ಕೆ.ವಿ.ಪುಷ್ಪ, ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ಮಹಿಳಾ ಸಂರಕ್ಷಣೆ ಅಧಿಕಾರಿ ಸುನಿತಾ ಎಂ.ವಿ. ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇಪಿ.ರಾಜ್ ಮೋಹನ್ ವರದಿ ವಾಚಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ 5 ಕೋಟಿ ರೂ.ವೆಚ್ಚದಲ್ಲಿ ಈ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಏಕಕಾಲಕ್ಕೆ 120 ಮಂದಿಗೆ ವಸತಿ ಸೌಲಭ್ಯಹೊಂದಿದೆ. 24ತಾಸುಗಳ ಸೆಕ್ಯೂರಿಟಿ ಸೌಲಭ್ಯ, ಸಿ.ಸಿ.ಟಿ.ವಿ.ಸೌಲಭ್ಯ, ವಿಶಾಲ ಗ್ರಂಥಾಲಯ, ಕಲಿಕಾ ಕೊಠಡಿ, ವಿಶೇಷ ಯೋಗ ತರಬೇತಿ ಸೌಲಭ್ಯ, ಎನ್.ಇ.ಡಿ.ಪ್ರಾಜೆಕ್ಟರ್ ಸಹಿತ ಸಭಾಂಗಣ, ಡೈನಿಂಗ್ ಹಾಲ್‍ಹೀಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಹಾಸ್ಟೆಲ್ ನಿರ್ಮಾಣಗೊಳ್ಳುತ್ತಿದೆ. ಕಿರು ಉದ್ಯಾನ, ಹೂದೋಟ, ಗ್ರಿಡ್ ಕೇಂದ್ರಿತ ಸೌರಶಕ್ತಿ ಪ್ಯಾನೆಲ್ ಗಳ ಸಹಿತ ಸೌಕರ್ಯಗಳನ್ನುಹಾಸ್ಟೆಲ್ ಬಳಿ ಸ್ಥಾಪಿಸಲಾಗಿದೆ. ಅವಳಿ ಕಟ್ಟಡ(ಟ್ವಿನ್ ಬಿಲ್ಡಿಂಗ್‍ಮಾದರಿಯಲ್ಲಿ ನಿರ್ಮಾಣಗೊಂಡಿರುವ ಹಾಸ್ಟೆಲ್‍ನಲ್ಲಿಕುಟುಂಬಶ್ರೀಯ ಪ್ರತ್ಯೇಕ ತರಬೇತಿ ಲಭಿಸಿದ,ಪೂಋಣಾವಧಿ ಚಟುವಟಿಕೆ ನಡೆಸುವ ಕ್ಯಾಂಟೀನ್ ಸಜ್ಜುಗೊಳಿಸಲಾಗಿದೆ.ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿರುವ, ಜಿಲ್ಲಾ ಮಹಿಳಾ ಶಿಶು ಅಧಿಕಾರಿ ಸಂಚಾಲಕರಾಗಿರುವ ಸಮಿತಿಹಾಸ್ಟೆಲ್ ನ ಮೇಲ್ನೋಟ ವಹಿಸುತ್ತಿದೆ.ಇಬ್ಬರಿಗೆ ಮತ್ತು ಮೂವರಿಗೆ ವಾಸಿಸಬಹುದಾದ ಕೊಠಡಿಗಳು ಇಲ್ಲಿ ನಿರ್ಮಾಣಗೊಂಡಿವೆ.ಸರಕಾರಿ, ಖಾಸಗಿಸಂಸ್ಥೇಗಳ ಸಿಬ್ಬಂದಿ, ವಿದ್ಯಾರ್ಥಿನಿಯರು ಇಲ್ಲಿ ಸೇರ್ಪಡೆಗೊಳ್ಳುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರಂ ಜಿಲ್ಲಾಧಿಕಾರಿಕಚೇರಿಯ ಎಂ ವಿಭಾಗದಲ್ಲಿ ಲಭ್ಯವಿದೆ.ಈ ಹಾಸ್ಟೆಲ್ ನಲ್ಲಿ ವಸತಿಸೌಲಭ್ಯ ಬಯಸುವವರು ಮಾ.10ರ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು.ಕಾಸರಗೋಡು, ಮಂಜೇಶ್ವರ, ಕುಂಬಳೆ ಶೈಷಣಿಕ ಉಪಜಿಲ್ಲಾ ಮಟ್ಟದ ಶಿಕ್ಷಕಿಯರಿಗೆ ಆದ್ಯತೆಯಿದೆ. ಅರ್ಜಿ ಫಾರಂ ಜಿಲ್ಲಾಧಿಕಾರಿಕಚೇರಿಯ 'ಎಂ'ವಿಭಾಗದಲ್ಲಿ ಲಭ್ಯವಿದೆ. ಈಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(04994256266, 9446494919)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

