ಕಾಸರಗೋಡು:ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಸಂಚಾರ ನಡೆಸುವವರನ್ನು ಸ್ವಾಗತಿಸಲು ಆವರಣಗೋಡೆಯಲ್ಲಿ ಮೂಡಿರುವ ಬಣ್ಣದ ಚಿತ್ರಗಳು ಸಿದ್ಧಗೊಂಡಿದೆ. ಮಹಿಳೆಯರಿಗೆ ಮೌಲ್ಯ ನೀಡುವ, ಹೆಣ್ಣಿನ ಬದುಕಿಗೆ ಗೌರವ ಸಲ್ಲಿಸುವ ಸಂದೇಶಗಳನ್ನು ಸಾರುವ ಚಿತ್ರಗಳು ಇಲ್ಲಿವೆ.
ರಾಜ್ಯ ಸರ್ಕಾರ, ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ನಡೆಯುತ್ತಿರುವ ಮಹಿಳಾ ಸಪ್ತಾಹದ ಅಂಗವಾಗಿ ಚತ್ರಕಾರರ ತಂಡವೊಂದು ಈ ಆವರಣಗೋಡೆ ಚಿತ್ರಗಳನ್ನು ರಚಿಸಿದೆ. 'ಆರೋಗ್ಯ, ಶಿಕ್ಷಣ, ಹೆಣ್ಣಿನ ಹಕ್ಕುಗಳನ್ನುಸಂರಕ್ಷಿಸುವ ವಿಧಾನಗಳೂ, ಸೌಲಭ್ಯಗಳು'ಎಂಬ ಸಂದೇಶದೊಂದಿಗೆ ಚಿತ್ರ ರಚನೆಯ ಸ್ಪರ್ಧೆ ಇಲ್ಲಿ ನಡೆದಿದೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಯ ಫೈರ್ ಫ್ಲೈಸ್ ಟೀಂ ಪ್ರಥಮ ಬಹುಮಾನ ಪಡೆದಿದೆ. ಪ್ರತಿ ಹೆಣ್ಣು ಹಾರಾಟ ನಡೆಸುವ ಸಲುವಾಗಿ ರೆಕ್ಕೆ ಒದಗಿಸುವುದು ಶಿಕ್ಷಣ ವಲಯ. ಶಿಕ್ಷಣ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಒದಗಿಸಲುಪೂರಕ ಎಂಬಸಂದೇಶವನ್ನು ಈ ಚಿತ್ರ ನೀಡುತ್ತಿದೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಪಂಚಾಯಿತಿ, ಸಮೀಪದ ಚಿನ್ಮಯಾ ವಿದ್ಯಾಲಯದ ಆವರಣಗೋಡೆಗಳಲ್ಲಿ ಈ ಚಿತ್ರಗಳನ್ನು ರಚಿಸಲಾಗಿದೆ. ಹಿರಿಯ ಚಿತ್ರ ಕಲಾವಿದ ಸಚ್ಚೀಂದ್ರನ್ ಕಾಡಗಂ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಡೀನಾ ಭರತನ್ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.


