ಕಾಸರಗೋಡು: ಕೇರಳ ಸ್ಟಾರ್ಟ್ ಅಪ್ ಮಿಷನ್ ಮತ್ತು ಸಿ.ಪಿ.ಸಿ.ಆರ್.ಐ. ಜಂಟಿಯಾಗಿ ನಡೆಸಿದ ರೂರಲ್ ಇಂಡಿಯಾ ಬಿಝಿನೆಸ್ ಕಾಂಕ್ಲೇವ್ ಸಿ.ಪಿ.ಸಿ.ಆರ್.ಐ.ಸಭಾಂಗಣದಲ್ಲಿ ಜರುಗಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಮಲಬಾರ್ ಇನ್ನಾವೇಶನ್ ವಲಯ ನಿರ್ದೇಶಕ ಪಿ.ಕೆ.ಗೋಪಾಲಕೃಷ್ಣನ್, ಸಿ.ಪಿ.ಸಿ.ಆರ್.ಐ. ನಿರ್ದೇಶಕಿ ಡಾ. ಅನಿತಾ ಕರುಣ್, ಸಮಾಜವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕೆ.ಮುರಳೀಧರ್, ವಿವಿಧ ವಲಯಗಳ ಸಾಧಕರಾದ ಸೆಂಥಿಲ್ ಕುಮಾರ್, ಡಾ.ಸಜಿ ವರ್ಗೀಸ್, ಜಂಷೀರ್, ಪ್ರದೀಪ್ ಪುನರ್ಕ ಮೊದಲಾದವರು ಉಪಸ್ಥಿತರಿದ್ದರು. ಕೇರಳ ಸ್ಟಾರ್ಟ್ ಅಪ್ ಮಿಷನ್ ಸಿ.ಇ.ಒ. ಡಾ.ಸಜಿ ಗೋಪಿನಾಥ್ ವರದಿ ವಾಚಿಸಿದರು.
ಕಾರ್ಯಕ್ರಮ ಅಂಗವಾಗಿ ನಡೆದ ಅಗ್ರಿಟೆಕ್ ಹಾಕಥಾನ್ ನಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸಿದ 75 ತಂಡಗಳು ಬಾಗವಹಿಸಿದ ಸ್ಪರ್ಧೆ ಜರುಗಿತು. ಬಹುಬೆಳೆಗೆ ಪೂರಕವಾಗಿರುವ ನೀರಾವರಿ ನಿಯಂತ್ರಣದ ಮೊಬೈಲ್ ಅಪ್ಲಿಕೇಷನ್ ತಯಾರಿಸಿದ ಸಹ್ಯಾದ್ರಿ ಕಾಲೇಜಿನ ತಂಡ ಈ ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಗೊಂಡಿದೆ.


