ಕಾಸರಗೋಡು: ಎಂಡೋ ಸಲ್ಫಾನ್ ಸಂತ್ರಸ್ತರ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ವರೆಗೆ 281.36 ಕೋಟಿ ರೂ. (281,36,58,033 ರೂ.)ವೆಚ್ಚ ನಡೆಸಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಜಿಲ್ಲಾ ಮಟ್ಟದ ಘಟಕ ಸಭೆಯಲ್ಲಿ ಅವರು ಈ ವಿಚಾರ ಮಂಡಿಸಿದರು.
ಆರ್ಥಿಕ ಸಹಾಯ ರೂಪದಲ್ಲಿ 171.10 ಕೋಟಿ ರೂ., ಚಿಕಿತ್ಸೆ ಗಾಗಿ 15.03 ಕೋಟಿ ರೂ., 2019-20 ನವೆಂಬರ್ ತಿಂಗಳ ವರೆಗಿನ ಪಿಂಚಣಿ, ಆಶವಾಸಕಿರಣಂ ಯೋಜನೆ, ವಿದ್ಯಾರ್ಥಿವೇತನ ಇತ್ಯಾದಿಗಳಿಗಾಗಿ 88.39 ಕೋಟಿ ರೂ. , ಸಾಲ ಮನ್ನಾ ವಿಭಾಗದಲ್ಲಿ 6.82 ಕೋಟಿ ರೂ. ವೆಚ್ಚಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಗಡಪತ್ರದಲ್ಲಿ 50ಕೋಟಿ ರೂ. ಮಂಜೂರು ಮಾಡಲಾಗಿದೆ. ಸುಪ್ರೀಂ ಕೋಟ್ರ್ನ 2019 ಜುಲೈಯ ತೀರ್ಪು ಜಾರಿಗೊಳಿಸುವ ನಿಟ್ಟಿನಲ್ಲಿ 217.06 ಕೋಟಿ ರೂ. ಅಗತ್ಯವಿದೆ ಎಂದು ಸಚಿವ ತಿಳಿಸಿದರು. 6728 ಸಂತ್ರಸ್ತರು ಎಂಡೋಸಲ್ಫಾನ್ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಹಾಸುಗೆ ಹಿಡಿದವರು 371, ಬೌದ್ಧಿಕ ಬೆಳವಣಿಗೆ ಯಿಲ್ಲದವರು 1499, ವಿಶೇಷಚೇತನರು 1189, ಕ್ಯಾನ್ಸರ್ ರೋಗಿಗಳು 699,ಇತರ ರೋಗಿಗಳು 2870 ಮಂದಿ ಇದ್ದಾರೆ.


