ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರಕಾರ ಅನುಕಂಪ ಸಹಿತ ಪ್ರಾಮಾಣಿಕ ಯತ್ನ ನಡೆಸುತ್ತಿದೆ ಎಂದು ಕಂದಾಯ ಸಚಿ ಇ.ಚಂದ್ರಶೇಖರನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ಎಂಡೋಸಲ್ಫಾನ್ ಜಿಲ್ಲಾ ಮಟ್ಟದ ಘಟಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲವು ಟ್ರಸ್ಟ್ ಗಳು ನಡೆಸುತ್ತಿರುವ ದುರಂತ ನಿವಾರಣೆ ಚಟುವಟಿಕೆಗಳಿಗೆ, ಪುನರ್ವಸತಿ ಕಾರ್ಯಗಳಿಗೆ ರಾಜ್ಯ ಸರಕಾರ ಪೂರ್ಣರೂಪದಲ್ಲಿ ಬೆಂಬಲ ನೀಡಲಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೆಲವು ಸಂಘಟನೆಗಳು ನೀಡುತ್ತಿರುವ ಸಹಾಯಗಳಿಗೆ ಸರಕಾರ ಬೆಂಬಲನಿಡಿರುವುದು ಇದಕ್ಕೆ ನಿರ್ದಶನವಾಗಿದೆ. ಆದರೆ ಕೆಲವೆಡೆ ನಡೆಸಲಾಗುತ್ತಿರುವ ಚಟುವಟಿಕೆಗಳು ಅರ್ಘದಲ್ಲೇ ಮೊಟಕುಗೊಂಡಿರುವ ಬಗ್ಗೆ ವರದಿಗಳಿವೆ. ಕೆಲವೆಡೆ ಸಂತ್ರಸ್ತರಿಗೆ ಜಾಗ ಹಸ್ತಾಂತರ ನಡೆಸಿದರೂ ವಸತಿ ನಿರ್ಮಾಣ ಇತ್ಯಾದಿ ನಡೆಯದೇ ಉಳಿದಿದೆ ಎಂಬ ಮಾಹಿತಿಗಳು ಲಭಿಸಿವೆ. ಈ ಬಗ್ಗೆ ಸಕಾರಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ನುಡಿದರು.
ಸಂತ್ರಸ್ತರಲ್ಲಿ ವಸತಿ ಯೋಜನೆ ಪ್ರಕಾರ ಹೊಸದುರ್ಗ ತಾಲೂಕಿನಲ್ಲಿ 9, ಮಂಜೇಶ್ವರದ ಎಣ್ಮಕಜೆ ಗ್ರಾಮದಲ್ಲಿ 36, ಸಹಿತ 45 ಪ್ಲಾಟ್ ಗಲು ಅರ್ಹ ಫಲಾನುಭವಿಗಳಿಗಾಗಿ ಪತ್ತೆಮಾಡಲಾಗಿದೆ. ಹೆಚ್ಚುವರಿ ಮಂದಿಗಳಿದ್ದರೆ ಚೀಟಿ ಎತ್ತುವ ಮೂಲಕ ಪತ್ತೆಮಾಡಲಾಗುವುದು.
ಎಣ್ಮಕಜೆ ಗ್ರಾಮದಲ್ಲಿ ಸತ್ಯಸಾಯಿ ಟ್ರಸ್ಟ್ ವತಿಯಿಂದ 36 ಮನಗಳನ್ನು ನಿರ್ಮಿಸಿ ನೀಡಲಾಗುತ್ತಿದ್ದು, ಈ ಪ್ರದೇಶಕ್ಕೆ ರಸ್ತೆ ನಿರ್ಮಾಣ ಕ್ರಮ ತ್ವರಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಭೆಯಲ್ಲಿ ತಿಳಿಸಿದರು. ಇದಕ್ಕಾಗಿ ಮಂಜೇಶ್ವರ ತಹಸೀಲ್ದಾರ್ ಅವರ ನೇತೃತ್ವದಲ್ಲಿ ಜಾಗ ಅಳತೆ ನಡೆಸಿ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಯಾಷ್ ಕೌಂಟರ್ ಲೆಸ್ ಆಸ್ಪತ್ರೆಗಳು, ವಸತಿ ನಿರ್ಮಾಣ ಯೋಜನೆ ಸಂಬಂಧ ಟ್ರಸ್ಟ್ ಗಳು ನಡೆಸುತ್ತಿರುವ ಚಟುವಟಿಕೆಗಳಿ ಸಂಬಂಧಿಸಿ ಪ್ರಗತಿ ವರದಿ ಈ ತಿಂಗಳ 20ರ ಮುಂಚಿತವಾಗಿ ಲಿಖಿತರೂಪದಲ್ಲಿ ನೀಡುವಂತೆ ಆದೇಶ ಜಾರಿಗಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.
ಉಕ್ಕಿನಡ್ಕದಲ್ಲಿ ಆರಂಭಿಸಲಾಗುವ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಅಲ್ಲದೆ ವಾರಕ್ಕೊಮ್ಮೆ ವಿಶೇಷ ವಿಭಾಗದ ಒ.ಪಿ.ಯೂ ಸಿದ್ಧಪಡಿಸಲಾಗುವುದು ಎಂದು ಎನ್.ಎಚ್.ಎಂ. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ರಾಮನ್ ಸವಾತಿ ವಾಮನ್ ತಿಳಿಸಿದರು. ಇದಕ್ಕಾಗಿ ಇತರ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳ ಪರಿಣತರು ಇಲ್ಲಿಗೆ ಆಗಮಿಸುವರು. ಈ ಚಟುವಟಿಕೆಗಳ ಪ್ರಗತಿ ನೋಡಿಕೊಂಡು ಶೀಘ್ರದಲ್ಲೇ ಶಾಶ್ವತ ಸೌಲಭ್ಯ ಏರ್ಪಡಿಸಲಾಗುವುದು ಎಂದರು.
ಉಕ್ಕಿನಡ್ಕ ವೈದ್ಯಕಿಯ ಕಾಲೇಜು ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉಚಿತ ಸೇವೆ ನಡೆಸುವ ನಿಟ್ಟಿನಲ್ಲಿ ಬಸ್ ಸೌಲಭ್ಯ ನಡೆಸುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ. ಇದಕ್ಕೆ ಸ್ವಯಂ ಸೇವ ಸಂಘಟನೆಗಳ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಶಾಸಕ ಎಂ.ರಾಜಗೋಪಾಲ್, ಮಾಜಿ ಶಾಸಕ ಎಂ.ಕುಮಾರನ್, ಎಂಡೋಸಲ್ಫಾನ್ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಎಂಕೃಷ್ಣದಾಸ್, ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣಭಟ್, ಕಯ್ಯೂರು-ಚೀಮೇನಿ ಗ್ರಾಮಪಂಚಾಯತ್ ಅಧ್ಯಕ್ಷೆ ಕೆ.ಶಕುಂತಲಾ, ಕಳ್ಳಾರ್ ಗ್ರಾಮಪಂಚಾಯತ್ ಉಪಾಧ್ಯಕ್ಷ ಟಿ.ಕೆ.ನಾರರಾಯಣನ್, ಕೋಡೋಂ-ಬೇಳೂರು ಗ್ರಾಮಪಂಚಾಯತ್ ಅಧ್ಯ್ಷೆ ಪಿ.ಎನ್.ಉಷಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಗೋವಿಂದನ್ ಪಳ್ಳಿಕಾಪಿಲ್, ಜೋಸೆಫ್ ವಡಗರ, ವಿ.ಕೆ.ರಮೇಶನ್, ಪ್ರಮೀಳಾ ಸಿ. ನಾಯಕ್, ಸಾಮಾಜಿಕ ಕಾರ್ಯಕರ್ತರಾ ನಾರಾಯಣನ್ ಪೆರಿಯ, ಮುನೀಸಾ ಅಂಬಲತ್ತರ, ಕೆ.ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.


