ಕಾಸರಗೋಡು: "ಮಹಿಳಾ ಪ್ರಬಲೀಕರಣದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಪೆÇೀಷಣೆ" ಎಂಬ ವಿಷಯದಲ್ಲಿ ದುಂಡುಮೇಜಿನಪರಿಷತ್ ಕೇರಳಕೇಂದ್ರೀಯ ವಿವಿಯಲ್ಲಿ ಜರುಗಿತು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇರಳ ಕೇಂದ್ರೀಯ ವಿವಿಯ ಸೆಂಟರ್ ಫಾರ್ ವಿಮೆನ್ಸ್ ಸ್ಟಡೀಸ್ ವತಿಯಿಂದ ಸಮಾರಂಭ ನಡೆಯಿತು. ವಿವಿಯ ರೆಜಿಸ್ತ್ರಾರ್ ಡಾ.ಎ.ರಾಧಾಕೃಷ್ಣನ್ ನಾಯರ್ ಉದ್ಘಾಟಿಸಿದರು. ವಿವಿಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ವೈದ್ಯಕೀಯ ವಿಭಾಗ ಪ್ರಾಚಾರ್ಯ ಡಾ.ಕೆ.ಆರ್.ತಂಗಪ್ಪನ್ ಅಧ್ಯಕ್ಷತೆ ವಹಿಸಿದ್ದರು. ಸೆಂಟರ್ ಫಾರ್ ಸ್ಟಡೀಸ್ ಸಂಚಾಲಕಿ ಡಾ.ಸುಪ್ರಿಯಾ ಪಿ., ಸಾಮಾಜಿಕ ಚಟುಟಿಕೆ ವಿಭಾಗ ಸಹಾಯಕಿ ಪ್ರಾಚಾರ್ಯೆ ಡಾ.ಲಕ್ಷ್ಮಿ ಪಿ. ಮೊದಲಾದವರು ಉಪಸ್ಥಿತರಿದ್ದರು.
"ಭಾರತದಲ್ಲಿ ಮಹಿಳೆಯರ ಆರೋಗ್ಯ ಮತ್ತು ಪೆÇೀಷಣೆ" ಮತ್ತು " ಆಯುಷ್ಮಾನ್ ಭಾರತ್-ಮಹಿಳಾ ಪ್ರಬಲೀಕರಣದಲ್ಲಿ ಆರೋಗ್ಯ ಮತ್ತು ಅಭಿವೃದ್ಧಿಯ ಪಾಲು" ಎಂಬ ವಿಷಯಗಳಲ್ಲಿ ಎರಡು ಗೋಷ್ಠಿಗಳೂ ಜರುಗಿದುವು. ಅನೇಕ ಪರಿಣತರು ಭಾಗವಹಿಸಿದ್ದರು.

