ಬದಿಯಡ್ಕ: ಖ್ಯಾತ ಸಾಹಿತಿ, ಜಾನಪದ ಸಂಶೋಧಕ, ನಿವೃತ್ತ ಶಿಕ್ಷಕ ಕೇಳು ಮಾಸ್ತರ್ ಅಗಲ್ಪಾಡಿ ಅವರ ಪ್ರಥಮ ಸಂಸ್ಮರಣಾ ಕಾರ್ಯಕ್ರªಧಿಂದು(ಮಾ.8ರಂದು) ಅಪರಾಹ್ನ 2 ಗಂಟೆಗೆ ನವಜೀವನ ಶಾಲಾ ರಸ್ತೆಯ ರಾಮಲೀಲಾ ಸಭಾಂಗಣದಲ್ಲಿ ನಡೆಯಲಿದೆ.
ಕೇಳು ಮಾಸ್ತರ್ ಅಗಲ್ಪಾಡಿ ಅಭಿಮಾನಿ ಬಳಕ ಹಾಗೂ ಸ್ನೇಹ ಹಸ್ತ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯುವುದು.
ಕಾರ್ಯಕ್ರಮದಲ್ಲಿ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಕೇಳು ಮಾಸ್ತರ್ ಅಭಿಮಾನಿಗಳು, ಒಡನಾಡಿಗಳು ನುಡಿನಮನ ಸಲ್ಲಿಸಿ ಮಾತನಾಡುವರು.


