ಮಂಜೇಶ್ವರ : ಪೆÇಲೀಸ್ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ನಿರ್ಲಜ್ಜ ಸ್ವಜನ ಪಕ್ಷಪಾತ ನಡೆದಿರುವುದಾಗಿ ಸಿಎಜಿ ವರದಿಯಲ್ಲಿ ಬಹಿರಂಗವಾಗಿದ್ದು. ಈ ಸರ್ಕಾರಿ ದರೋಡೆಯ ಬಗ್ಗೆ ಕನಿಷ್ಠ ತನಿಖೆ ನಡೆಸಲು ಸರಕಾರ ಸಿದ್ಧವಾಗದೇ ಇರುವುದು ಉನ್ನತ ರಾಜಕೀಯ ನೇತೃತ್ವದ ಕೃಪಾಶ್ರಯದಲ್ಲಿ ಈ ಭ್ರಷ್ಟಾಚಾರ ನಡೆದಿರುವುದನ್ನು ಸೂಚಿಸುತ್ತದೆ. ಪೆÇಲೀಸ್ ಇಲಾಖೆಯ ಅತ್ಯಾಧುನಿಕ ಬಂದೂಕುಗಳು, ಗುಂಡುಗಳು ಕಾಣೆಯಾಗಿರುವುದು ಆತಂಕವುಂಟು ಮಾಡುವ ಘಟನೆಯಾಗಿದ್ದರೂ ಸರ್ಕಾರ ಮೌನಕ್ಕೆ ಶರಣಾಗಿದೆ. ಇವುಗಳು ಕ್ರಿಮಿನಲ್ ಗಳು ಅಥವಾ ದೇಶವಿರೋಧಿ ಶಕ್ತಿಗಳ ಕೈ ಸೇರಿಲ್ಲವೆಂಬ ಖಾತರಿ ನೀಡಬೇಕಾದ ಗೃಹಖಾತೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿ ವಿಷಯಾಂತರ ಮಾಡಿ ಪಾರಾಗಲು ನೋಡುತ್ತಿದ್ದಾರೆ. ಪೆÇಲೀಸ್ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ನೀಡಿದ ಹಣದಲ್ಲಿ ವಿಲಾಸಿ ಬಂಗಲೆಗಳನ್ನು ಕಟ್ಟಿ ಅಕ್ರಮವೆಸಗಲಾಗಿದೆ. ಪೆÇಲೀಸ್ ಠಾಣೆಗಳಿಗೆ ಅಗತ್ಯವಿರುವ ವಾಹನಗಳನ್ನು ಒದಗಿಸದೆ ಡಿಜಿಪಿ ಹಾಗೂ ಉನ್ನತ ಅಧಿಕಾರಿಗಳು ಐಷಾರಾಮಿ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಡಿಜಿಪಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸಮರ್ಥಿಸುವ ಕೆಲಸದಲ್ಲಿ ಮುಖ್ಯಮಂತ್ರಿ ನಿರತರಾಗಿದ್ದಾರೆ. ಮುಖ್ಯಮಂತ್ರಿ ಮತ್ತು ಪೆÇಲೀಸ್ ಮಹಾ ನಿರ್ದೇಶಕರ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ರಾಜ್ಯದ ತನಿಖಾ ತಂಡಗಳಿಗೆ ಪರಿಮಿತಿ ಇರುವ ಕಾರಣ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀ ಕೆ.ಕೆ.ರಾಜೇಂದ್ರನ್ ಆಗ್ರಹಿಸಿದರು.
ಸಿಎಜಿ ವರದಿಯ ಹಿನ್ನೆಲೆಯಲ್ಲಿ ಪೆÇಲೀಸ್ ಇಲಾಖೆಯ ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ ಮತ್ತು ಡಿಜಿಪಿಯವರ ಶಾಮೀಲಾತಿ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಂಜೇಶ್ವರ ಪೆÇಲೀಸ್ ಠಾಣೆ ಮುಂಭಾಗದಲ್ಲಿ ಶನಿವಾರ ನಡೆದ ಧರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿಪಿಎಂ ಗೂಂಡಾಗಳಿಂದ ನಿರ್ದಯವಾಗಿ ಕೊಲೆಗೀಡಾದ ಪೆರಿಯಾದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ರ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು ಎಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರವು ದೆಹಲಿಯಿಂದ ಎಂಬತ್ತೆಂಟು ಲಕ್ಷ ರೂಪಾಯಿ ಫೀಸು ನೀಡಿ ಆರೆಸ್ಸೆಸ್ ನ ವಕೀಲರನ್ನು ನೇಮಿಸಿದೆ. ಹತ್ಯೆಗೀಡಾದವರ ಕುಟುಂಬಕ್ಕೆ ನಯಾಪೈಸೆ ನೀಡದ ಸರಕಾರಕ್ಕೆ ಆ ತನಿಖೆಯನ್ನು ಬುಡಮೇಲುಗೊಳಿಸಲು ಕೋಟ್ಯಂತರ ಖರ್ಚು ಮಾಡುವ ಆತುರವಿದೆ. ಈ ಸರ್ಕಾರ ತನ್ನ ಸ್ವಯಂ ಕೃತಾಪರಾಧಗಳಿಂದ ಶೀಘ್ರದಲ್ಲೇ ನೆಲಕಚ್ಚಲಿದೆಯೆಂದು ಅವರು ಹೇಳಿದರು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು. ಹರ್ಷಾದ್ ವರ್ಕಾಡಿ, ಮೊಹಮ್ಮದ್ ಡಿಎಂಕೆ, ಸತ್ಯನ್ ಉಪ್ಪಳ, ವಸಂತರಾಜ್ ಶೆಟ್ಟಿ, ಹಸೀನಾ ಹಮೀದ್, ಮಮತಾ ದಿವಾಕರ್, ಸುನೀತಾ ಡಿ ಸೋಜಾ, ಶಶಿಕಲಾ, ಪಿ.ಎಂ.ಖಾದರ್, ಕಾಯಿಂಞÂ ಹಾಜಿ,ಎಸ್.ಅಬ್ದುಲ್ ಖಾದರ್, ಪ್ರಕಾಶ್ ನಾಯ್ಕ್,ಸದಾಶಿವ ಕೆ, ಗುರುವಪ್ಪ ಮಂಜೇಶ್ವರ,ಮೊಹಮ್ಮದ್ ಮಜಾಲ್, ವಿ.ಪಿ.ಮಹಾರಾಜನ್, ಹೇಮಲತಾ,ಸೀತಾ,ಶಾಂತಾ ಆರ್.ನಾಯ್ಕ್, ಪ್ರಶಾಂತಿ,ಬಾಬು ಬಂದ್ಯೋಡು, ರಾಜೇಶ್ ನಾಯ್ಕ್,ಇರ್ಷಾದ್ ಮಂಜೇಶ್ವರ, ಇಕ್ಬಾಲ್ ಕಳಿಯೂರು, ನಾಗೇಶ್ ಮಂಜೇಶ್ವರ, ಹಮೀದ್ ಕಣಿಯೂರು,ಅಜೀಜ್ ಕಲ್ಲೂರ್,ಸುಧಾಕರ ಉಜಿರೆ, ಶರೀಫ್ ಅರಿಬೈಲ್,ತಮೀಮ್ ಮಂಜೇಶ್ವರ,ಚಂದ್ರಶೇಖರ್ ಐಲ್ ಮುಂತಾದವರು ಉಪಸ್ಥಿತರಿದ್ದರು. ಉಮ್ಮರ್ ಶಾಫಿ ಸ್ವಾಗತಿಸಿ, ದಿವಾಕರ್ ಎಸ್.ಜೆ ವಂದಿಸಿದರು.


