ತಿರುವನಂತಪುರ: ಕೊರೊನಾ ವೈರಸ್ ಸೋಂಕು ಭೀತಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದಂಗವಾಗಿ ಜನರು ಮುಖಕ್ಕೆ ಮಾಸ್ಕ್ ಧರಿಸತೊಡಗಿರುವಂತೆಯೇ ಅದಕ್ಕೂ ರಾಜ್ಯದಲ್ಲಿ ತೀವ್ರ ಕ್ಷಾಮ ತಲೆದೋರತೊಡಗಿದೆ.
ಮಾಸ್ಕ್ ತಯಾರಿಸಲು ಅಗತ್ಯದ ಕಚ್ಛಾ ಸಾಮಾಗ್ರಿಗಳಲ್ಲಿ ಬಹುಪಾಲು ಚೀನಾದಿಂದಲೇ ಭಾರತಕ್ಕೆ ತಲುಪಿಸಲಾಗುತ್ತದೆ. ಆದರೆ ವೈರಸ್‍ನ ಮೂಲ ಚೀನಾ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಈ ಕಚ್ಛಾ ಸಾಮಾಗ್ರಿಗಳ ಆಮದುಗೊಳಿಸದೇ ಇರುವುದು ಮಾಸ್ಕ್‍ಗಳ ಕ್ಷಾಮ ತಲೆದೋರಲು ಪ್ರಧಾನ ಕಾರಣವಾಗಿದೆ. ಇದೇ ವೇಳೆ ಮಾಸ್ಕ್, ಸ್ಯಾನಿಟರ್‍ಗಳಿಗೆ ಅಮಿತ ಬೆಲೆ ವಸೂಲು ಮಾಡುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮುನ್ನೆಚ್ಚರಿಕೆ ನೀಡಿದ್ದಾರೆ.


