ಕಾಸರಗೋಡು: ಕೇರಳ ಎನ್.ಜಿ.ಒ. ಅಸೋಸಿಯೇಶನ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಹಿಳಾ ಸಮಾವೇಶ ನಡೆಯಿತು.
ನೆಹರೂ ಕಾಲೇಜು ಪ್ರಾಂಶುಪಾಲೆ ಡಾ.ಪಿ.ವಿ.ಪುಷ್ಪಜ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಪೆÇ್ರಟೆಕ್ಷನ್ ಆಫೀಸರ್ ಎಂ.ವಿ.ಸುನೀತಾ ಮಹಿಳಾ ಸಬಲೀಕರಣ ಎಂಬ ವಿಷಯದಲ್ಲಿ ಮಾತನಾಡಿದರು. ಜಿಲ್ಲಾ ಮಹಿಳಾ ಫಾರಂ ಸಂಚಾಲಕಿ ಎಸ್.ಎಂ.ರಜನಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಮಹಿಳಾ ಫಾರಂ ಸಂಚಾಲಕಿ ಕೆ.ಆಸ್ಮಾ, ಎಂ.ಮೀನಾ ಕುಮಾರಿ, ಪಿ.ವಲ್ಸಲ, ಎಂ.ಟಿ.ಪ್ರಸೀತಾ ಮೊದಲಾದವರು ಉಪಸ್ಥಿತರಿದ್ದರು. ರಜನಿ ಕೆ. ಸ್ವಾಗತಿಸಿದರು. ಶಿಬಾ ಕೆ. ವಂದಿಸಿದರು.

