ಕಾಸರಗೋಡು: ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವದ ಅಂಗವಾಗಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಪರಿಸರದಿಂದ ಮಹಾ ರಥ ಯಾತ್ರೆ ಆರಂಭಗೊಂಡಿತು.
ರಥ ಯಾತ್ರೆಯನ್ನು ಮಾಣಿಲ ಶ್ರೀ ಮೋಹನ್‍ದಾಸ ಸ್ವಾಮೀಜಿ ಅವರು ಉದ್ಘಾಟಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಬಿಪಿನ್‍ದಾಸ್ ರೈ ಅಧ್ಯಕ್ಷತೆ ವಹಿಸಿದರು.
ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಕಾರಡ್ಕ ಪಂಚಾಯತ್ ಅಧ್ಯಕ್ಷೆ ಅನಸೂಯ ರೈ, ರವೀಶ ತಂತ್ರಿ ಕುಂಟಾರು, ಪ್ರಭಾಶಂಕರ ಮಾಸ್ತರ್ ಮಧೂರು, ಮನೋಜ್ ನಯನಾಸ್, ಸುಕುಮಾರ ಕುದ್ರೆಪ್ಪಾಡಿ, ಆದೂರು ಶ್ರೀ ಭಗವತಿ ಕ್ಷೇತ್ರ ಮುಖ್ಯ ಕರ್ಮಿ ಕೊಟ್ಟನ್ ಅಂದಿತಿರಿಯನ್, ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಕೆ.ಎನ್.ವೆಂಕಟರಮಣ ಹೊಳ್ಳ, ಕೆ.ಬಾಬು, ರಘುನಾಥ ರೈ, ದಾಮೋದರ ಕಾವುಗೋಳಿ, ಹರಿಶ್ಚಂದ್ರ ಬೇರಿಕೆ ಮೊದಲಾದವರಿದ್ದರು.
ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಬಂಬ್ರಾಣ ಸ್ವಾಗತಿಸಿದರು. ಸಂಚಾಲಕ ಹರಿಪ್ರಸಾದ್ ಆದೂರು ವಂದಿಸಿದರು.

