ಕಾಸರಗೋಡು: ಕೋಟೆಕಣಿ ಸಪರಿವಾರ ಶ್ರೀ ಅನ್ನಪೂರ್ಣೇಶ್ವರೀ ಮಹಾಕಾಳಿ ದೇವಸ್ಥಾನದಲ್ಲಿ 5 ನೇ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮಾ.8 ರಂದು ಆರಂಭಗೊಂಡಿದ್ದು, ಮಾ.9 ರಂದು ಸಂಪನ್ನಗೊಳ್ಳಲಿದೆ.
ಬ್ರಹ್ಮಶ್ರೀ ದೇರೆಬೈಲು ಶ್ರೀ ಶಿವಪ್ರಸಾದ್ ತಂತ್ರಿ ಅವರ ನೇತೃತ್ವದಲ್ಲಿ ಮಾ.8 ರಂದು ಪೂರ್ವಾಹ್ನ ಸಾಮೂಹಿಕ ಪ್ರಾರ್ಥನೆ ಮತ್ತು ಗಣಪತಿ ಹೋಮ, ಅ„ವಾಸ ಹೋಮ, 25 ಸಾನಿಧ್ಯ ಕಲಶ ಪ್ರತಿಷ್ಠೆ, ಶ್ರೀ ದೇವಿಗೆ ಕಲಶಾಭಿಷೇಕ, ಮಹಾಪೂಜೆ ನಡೆಯಿತು. ಆ ಬಳಿಕ ಶ್ರೀ ದೇವಿಯ ದಿವ್ಯ ದರ್ಶನ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ, ಸ್ಥಳೀಯ ಕಲಾವಿದರಿಂದ ನೃತ್ಯ ವೈಭವ, ಸಂಜೆ ದೀಪ ಪ್ರತಿಷ್ಠೆ, ಭಜನೆ, ರಾತ್ರಿ ಮಹಾಪೂಜೆ, ಶ್ರೀ ದೇವಿಯ ದಿವ್ಯ ದರ್ಶನ ಹಾಗು ಮಹಾಸರ್ವಾಲಂಕಾರ ಪೂಜೆ, ಪ್ರಸಾದ ವಿತರಣೆ, ಅನ್ನದಾನ, ನಾಟ್ಯಶಿವ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಮಾ.9 ರಂದು ಬೆಳಗ್ಗೆ 10 ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಅಪರಾಹ್ನ 3 ರಿಂದ ಗುಳಿಗನ ಕೋಲ ಜರಗಲಿದೆ.


