ಕಾಸರಗೋಡು: ಕೊರನಾ ಹಾವಳಿ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಐಸೊಲೇಷನ್‍ನಲ್ಲಿರುವವರು ಮತ್ತು ಅವರ ಪರಿಚಾರಕರಾಗಿ ನಿಯೋಜಿತರಾದವರು ಪಾಲಿಸಬೇಕಾದ ನಿಬಂಧನೆಗಳು:
1. ಮನೆಯ ಇತರ ಸದಸ್ಯರೊಂದಿಗಿನ ಸಂಪರ್ಕ ಕಡ್ಡಾಯವಾಗಿ ಕಡಿತಗೊಳಿಸಬೇಕು.
2. ರೋಗಿಯನ್ನು ಉಪಚರಿಸಲು ನಿಯೋಜಿತರಾದವರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸುವುದರ ಜತೆಗೆ ಇನ್ನಿತರ ಮುಂಜಾಗರೂಕತೆಯ ಕ್ರಮ ಪಾಲಿಸಬೇಕು.
3. ರೋಗಿಯ ಬಳಸಿರುವ ವಸ್ತುಗಳ ಬಳಿ ತೆರಳ ಬಾರದು.
4. ರೋಗಿಯ ಕೊಠಡಿಯನ್ನು ಪ್ರವೇಶಿಸಿದರೆ, ಸ್ಪರ್ಶಿಸಿದರೆ ಕಡ್ಡಾಯವಾಗಿ ಕೈಗಳನ್ನು ಸಾಬೂನು ಬಳಸಿ ತೊಳೆಯಬೇಕು.
5. ಕೈಗಳನ್ನುಉಜ್ಜಿಕೊಳ್ಳುವುದಕ್ಕೆ ಕಾಗದದ ಟವೆಲ್, ಬಟ್ಟೆಯ ಟವೆಲ್ ಬಳಸಬೇಕು.
6. ರೋಗಿ ಬಳಸಿದ ಮಾಸ್ಕ್, ಟವೆಲ್ ಇತ್ಯಾದಿಗಳನ್ನು ಸುರಕ್ಷಿತ ರೀತಿ ಉರಿಸಿಬಿಡಬೇಕು.
7. ಬಳಸಿದ ಪಾತ್ರೆ, ಬೆಡ್ ಶೀಟ್ ಇತ್ಯಾದಿಗಳನ್ನು ಮತ್ತೊಬ್ಬರು ಬಳಸಕೂಡದು.
8. ಬೈರಾಸು ಸಹಿತ ಬಟ್ಟೆಗಳನ್ನು ಬ್ಲೀಚಿಂಗ್ ಪೌಡರ್ ಬಳಸಿ( 1ಲೀ. ನೀರಿಗೆ 3 ಟೀಸ್ಪೂನ್ ಬ್ಲೀಚಿಂಗ್ ಪೌಡರ್ ಬೆರೆಸಿ) ಪ್ರತ್ಯೇವಾಗಿ ಶುಚಿಗೊಳಿಸಬೇಕು.
9. ರೋಗಿಯೊಂದಿಗೆ ಸಂದರ್ಶನಕ್ಕೆ ಇತರರಿಗೆ ಅವಕಾಶ ಕೊಡಕೂಡದು.

