HEALTH TIPS

ರಾಜ್ಯದಲ್ಲಿ ಹೊಸ ಕೊರೋನಾ ಪ್ರಕರಣ ಇಂದಿಲ್ಲ-ಮುಖ್ಯಮಂತ್ರಿ

   
         ತಿರುವನಂತಪುರ: ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ವಿರುದ್ದ ವ್ಯಾಪಕ ನಿಯಂತ್ರಣ ಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಮಂಗಳವಾರ ರಾಜ್ಯದಲ್ಲಿ ಹೊಸತಾದ ಕೊರೋನಾ ಬಾಧಿತರು ಕಂಡುಬಂದಿಲ್ಲ. ಆದರೆ ಮಾಹಿಯಲ್ಲಿ ಓರ್ವನಿಗೆ ಕೊರೋನಾ ಬಾಧಿಸಿರುವುದು ದೃಢಪಟ್ಟಿದೆ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
          ರಾಜ್ಯದಲ್ಲಿ ಇಂದು 18011 ಮಂದಿಗಳನ್ನು ಗಮನಿಸಲಾಗುತ್ತಿದೆ. ಈ ಪೈಕಿ 17744 ಮಂದಿ ಅವರವರ ಮನೆಗಳಲ್ಲೂ, 268 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿರುವರು. ಜೊತೆಗೆ 65 ಮಂದಿಗಳನ್ನು ಇಂದು ಹೊಸತಾಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಪರೀಕ್ಷೆಗೊಳಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು. ಅಲ್ಲದೆ 5372 ಮಂದಿಗಳನ್ನು ನಿಗಾಗೊಳಪಡಿಸಲಾಗುವುದೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
           ಈ ಹಿಂದೆ ಸಂಶಯಿಸಲಾಗಿದ್ದ 4353 ಮಂದಿಗಳಲ್ಲಿ ಕೊರೋನಾ ವೈರಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ಮರಳಿಸಲಾಗಿದೆ. ಇಂದು 2467 ರಕ್ತ ಮಾದರಿಗಳನ್ನು ಹೆಚ್ಚಿನ ಪರಿಶೋಧನೆಗಾಗಿ ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿತ್ತು. ಇದರಲ್ಲಿ 1807 ಮಾದರಿಗಳು ನೆಗೆಟಿವ್ ಆಗಿ ಕಂಡುಬಂದಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿದರು.
                     ಗಾಬರಿ ಬೇಡ:
   ರಾಜ್ಯದ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಏರ್ಪಡಿಸಲಾದ ನಿಬಂಧನೆಗಳು ಮುಂದುವರಿಯಲಿದೆ. ಜನರು ಸರ್ಕಾರದ ನಿಬಂಧನೆಗಳನ್ನು ಪಾಲಿಸುವಲ್ಲಿ ಜವಾಬ್ದಾರಿ ವಹಿಸಬೇಕು. ಜನಜಂಗುಳಿ ಸೇರುವುದು, ಕಾರ್ಯಕ್ರಮಗಳ ಆಯೋಜನೆ, ಸಭೆ ಮುಂತಾದ ಎಲ್ಲಾ ಕಾರ್ಯಕ್ರಮಗಳೂ ರದ್ದಾಗಿರುತ್ತದೆ. ಆದರೆ ಈ ಹಿನ್ನೆಲೆಯನ್ನಿರಿಸಿ ದೈನಂದಿನ ಚಟುವಟಿಕೆಗಳಿಗೆ ಕಡಿವಾಣ ಕೂಡದು. ಪೇಟೆ ಸಹಿತ ದಿನನಿತ್ಯದ ಕಾರ್ಯಚಟುವಟಿಕೆಗಳು ಜಾಗರೂಕತೆಯಿಂದ ಸಾಗಬೇಕು ಎಂದು ಪಿಣರಾಯಿ ವಿಜಯನ್ ರಾಜ್ಯದ ಜನತೆಗೆ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries