ಶ್ರೀ ಪೆರ್ಣೆ ಮುಚ್ಚಿಲೋಟು ಭಗವತೀ ಕ್ಷೇತ್ರ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಸಮಿತಿ ವಿಶೇಷ ಸೂಚನೆ.
ಕುಂಬಳೆ: ಕೊರೋನಾ ರೋಗ ಭೀತಿಯ ಕಾರಣ ಜಿಲ್ಲಾ ಕಲೆಕ್ಟರ್ ಹಾಗು ಅರೋಗ್ಯ ಇಲಾಖೆಯ ವಿಶೇಷ ಸೂಚನೆ ಮೇರೆಗೆ ಶ್ರೀ ಪೆರ್ಣೆ ಮುಚ್ಚಿಲೋಟು ಭಗವತೀ ಕ್ಷೇತ್ರ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ತಾಂತ್ರಿಕ ಕಾರ್ಯಕ್ರಮಗಳು ಮಾತ್ರ ನಡೆಯುತ್ತಿದ್ದು ಉಳಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಮುಂಜಾಗ್ರತಾ ಕ್ರಮವಾಗಿ ರದ್ದುಗೊಳಿಸಲಾಗಿದೆ, ಭಕ್ತಭಿಮಾನಿಗಳು ಕ್ಷೇತ್ರಕ್ಕೆ ಅಗಮಿಸದೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

