HEALTH TIPS

ಕನ್ನಡ ಸಿರಿ ಸಮ್ಮೇಳನ-ಮುಂಬಯಿ ಸಮಿತಿ ರಚನೆ-ಸಮಾಲೋಚನಾ ಸಭೆ


          ಕುಂಬಳೆ: ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹುಟ್ಟೂರು ಹಾಗೂ ಸಂಬಂಧಿಗಳು, ಸ್ನೇಹಿತರು ನೆಲಸಿರುವ ತುಳುನಾಡಿನ ಮಣ್ಣಿನ ಆತ್ಮೀಯ ಸುಮಧುರ ನೆನಪುಗಳು ಪುಳಕಗೊಳಿಸುತ್ತದೆ. ಗಡಿನಾಡು ಕಾಸರಗೋಡಿನೊಂದಿಗೆ ಇರುವ ಒಡನಾಟಗಳಿಂದ ಅಲ್ಲಿಯ ವಿವಿಧ ಚಟುವಟಿಕೆಗಳು ಸ್ವತಃ ನಮ್ಮದೇ ಎಂಬ ಭಾವನೆಯಿಂದ ಕನ್ನಡ ಸಿರಿ ಸಮ್ಮೇಳನದ ಯಶಸ್ವಿ ನಮ್ಮೆಲ್ಲರ ಹೊಣೆಯಾಗಿದೆ ಎಂದು ಉದ್ಯಮಿ, ಸಂಘಟಕ, ಕರ್ನಾಟಕ ಸಂಘದ ಮುಂಬಯಿ ಘಟಕದ ಗೌರವ ಅಧ್ಯಕ್ಷ  ಡಾ.ವಿರಾರ್ ಶಂಕರ ಶೆಟ್ಟಿ ಅವರು ತಿಳಿಸಿದರು.
         ಅನಂತಪುರದಲ್ಲಿ ಮೇ.1 ರಿಂದ 3ರ ವರೆಗೆ ಐತಿಹಾಸಿಕವಾಗಿ ಆಯೋಜಿಸಲಾಗುವ ಅಖಿಲ ಭಾರತ ಕನ್ನಡ ಸಿರಿ ಸಮ್ಮೇಳದ ಪೂರ್ವಭಾವಿಯಾಗಿ ಭಾನುವಾರ ಮುಂಬಯಿ ಮಹಾ ನಗರದ ಚೆಂಬೂರು ತಿಲಕ್ ನಗರದ ನವದುರ್ಗಾ ಮಿತ್ರಮಂಡಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮುಂಬಯಿ ಸಮಿತಿ ರಚನೆ ಹಾಗೂ ಪೂರ್ವಭಾವಿ ಸಭೆಯನ್ನು ಡೋಲು ಬಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
         ಕನ್ನಡ ಭಾಷಾ ಸಮೃದ್ದತೆಯನ್ನು ಉಳಿಸಿ-ಬೆಳೆಸುವ, ಪ್ರಚುರಪಡಿಸುವ ಜೊತೆಗೆ ಸಂಘಟನಾತ್ಮಕವಾಗಿ ಶಕ್ತಿ ಪ್ರದರ್ಶನದ ವೇದಿಕೆಯಾಗಿ ರಾಷ್ಟ್ರೀಯ ಸಿರಿ ಸಮ್ಮೇಳನ ವರ್ತಮಾನದ ಅಗತ್ಯವೂ ಆಗಿದೆ. ಮುಂಬಯಿಯಂತಹ ಮಹಾ ನಗರಗಳಲ್ಲಿ ನೆಲಸಿರುವ ಕನ್ನಡ-ತುಳು ಭಾಷಿಕರು ಹುಟ್ಟೂರಿಂದ ಬಹುದೂರ ಕಾರ್ಯಚಟುವಟಿಕೆ ನಡೆಸುತ್ತಿದ್ದರೂ ಅಂತರಂಗದಲ್ಲಿ ಪ್ರವಹಿಸುವ ಭಾವನೆಗಳು ಕನ್ನಡ ನೆಲದ ಅಂತಸ್ಸತ್ವವಾಗಿದ್ದು, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ತಿಕ ಸೊಗಡುಗಳನ್ನು ವ್ಯಾಪಿಸುವ ಉತ್ಸುಕತೆ ನಿತ್ಯವೂ ಪುಟಿದೇಳುತ್ತಿರುತ್ತದೆ. ಈ ಕಾರಣದಿಂದ ಸಮ್ಮೇಳನದ ಯಶಸ್ಸಿಗೆ ಮುಂಬಯಿ ನಗರದ ಸಕಲರ ಬೆಂಬಲವೂ ಇದೆ ಎಂದು ಈ ಸಂದರ್ಭ ತಿಳಿಸಿದರು.
        ಚೆಂಬೂರು ಪೆಸ್ತುಮ್ ಸಾಗರ್ ಸಂಘಟನೆಯ ಅಧ್ಯಕ್ಷ ರಾಮಣ್ಣ ದೇವಾಡಿಗ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಅನಂತಪುರದಲ್ಲಿ ಸಂಘಟಿಸಲಾಗುವ ಕನ್ನಡ ಸಿರಿ ಸಮ್ಮೇಳನ ಸಮಗ್ರ ಭಾರತದಲ್ಲಿ ಹರಡಿರುವ ಕನ್ನಡ-ತುಳು ಭಾಷಿಕರ ಮಹಾನ್ ಸಮ್ಮೇಳನವಾಗಿ ಮೂಡಿಬರಲಿದೆ. ಈ ನಿಟ್ಟಿನಲ್ಲಿ ಮುಂಬಯಿ ಸಹಿತ ರಾಷ್ಟ್ರದ ಮೂಲೆಮೂಲೆಗಳಲ್ಲಿ ನೆಲಸಿರುವ ಕನ್ನಡ-ತುಳು ಭಾಷಾಭಿಮಾನಿಗಳ ಸಂಪೂರ್ಣ ಬೆಂಬಲ ನೀಡುವುದು ಕರ್ತವ್ಯವೂ ಆಗಿದೆ ಎಂದರು.
    ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಸದಾಶಿವ ಕರ್ಕೇರ, ರಜನಿ ಪೈ, ರಾಮಣ್ಣ ದೇವಾಡಿಗ, ಜಯ ಕೆ.ಶೆಟ್ಟಿ ಮುಲುಂಡ್, ಬಾಬುಶಿವ ಪೂಜಾರಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ನವೀನ್ ಶೆಟ್ಟಿ ಇನ್ನಾ ಬಾಳಿಕೆ, ಬಾಬು ಬೆಳ್ಚಡ, ಉಷಾ ರಮೇಶ್ ಶೆಟ್ಟಿ, ರಮ್ಯಾ ಉದಯ ಶೆಟ್ಟಿ, ಉದಯ ಎಲ್.ಶೆಟ್ಟಿ ಪೇಜಾವರ, ಕೇಶವ ಎಂ.ಆಳ್ವ, ನಾರಾಯಣ ಶೆಟ್ಟಿ ನಂದಳಿಕೆ, ಸುರೇಶ್ ಶೆಟ್ಟಿ ಕೌಡೂರು, ಸುಂದರ ಶೆಟ್ಟಿ ವಾಮದಪದವು, ತಿಮ್ಮ ದೇವಾಡಿಗ, ನಾಗವೇಣಿ ಎಸ್.ಶೆಟ್ಟಿ, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಶ್ರೀಧರ ಶೆಟ್ಟಿ ಚೆಂಬೂರು, ಕವಿ ನಂದಳಿಕೆ ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿ ಶುಭಹಾರೈಸಿದರು.
        ಈ ಸಂದರ್ಭ ಸಿರಿ ಸಮ್ಮೇಳನ ಮುಂಬಯಿ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಧರ್ಮಪಾಲ ದೇವಾಡಿಗ, ಅಧ್ಯಕ್ಷರಾಗಿ ವಿರಾರ್ ಡಾ.ಶಂಕರ ಶೆಟ್ಟಿ, ಉಪಾಧ್ಯಕ್ಷರಾಗಿ ಸದಾಶಿವ ಕರ್ಕೇರ, ರಜನಿ ಪೈ, ರಾಮಣ್ಣ ದೇವಾಡಿಗ, ಜಯ ಕೆ.ಶೆಟ್ಟಿ ಮುಲುಂಡ್, ಬಾಬುಶಿವ ಪೂಜಾರಿ, ಸಂಚಾಲಕರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ, ಗೌರವ ಕಾರ್ಯದರ್ಶಿಗಳಾಗಿ ನವೀನ್ ಶೆಟ್ಟಿ ಇನ್ನಾ ಬಾಳಿಕೆ, ಬಾಬು ಬೆಳ್ಚಡ, ಉಷಾ ರಮೇಶ್ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ರಮ್ಯಾ ಉದಯ ಶೆಟ್ಟಿ, ಕಾರ್ಯದರ್ಶಿಗಳಾಗಿ ಉದಯ ಎಲ್.ಶೆಟ್ಟಿ ಪೇಜಾವರ, ಕೇಶವ ಎಂ.ಆಳ್ವ, ನಾರಾಯಣ ಶೆಟ್ಟಿ ನಂದಳಿಕೆ, ಸುರೇಶ್ ಶೆಟ್ಟಿ ಕೌಡೂರು, ಸುಂದರ ಶೆಟ್ಟಿ ವಾಮದಪದವು, ತಿಮ್ಮ ದೇವಾಡಿಗ, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಸಲಹೆಗಾರರಾಗಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಶ್ರೀಧರ ಶೆಟ್ಟಿ ಚೆಂಬೂರು ಅವರು ಸರ್ವಾನುಮತದಿಂದ ಆಯ್ಕೆಯಾದರು.
       ಸಿರಿ ಸಮ್ಮೇಳನದ ಆಯೋಜನಾ ಸಮಿತಿ ಸದಸ್ಯ ಡಾ.ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮೇಳನದ ಸಮಗ್ರ ಮಾಹಿತಿ ನೀಡಿದರು. ಸುರೇಶ್ ಶೆಟ್ಟಿ ಯೆಯ್ಯಾಡಿ ಸ್ವಾಗತಿಸಿ, ಸುಧಾಕರ ಎಲ್ಲೂರು ನಿರ್ವಹಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries