ಪೆರ್ಲ:ಬಾಡೂರು ಹೊಸಗದ್ದೆಯ ದಿಲೀಪ್ ಕುಮಾರ್ ಮತ್ತು ವತ್ಸಲಾ ದಂಪತಿಗಳ 6 ತಿಂಗಳ ಪುತ್ರ ಹೃದಯ್ ಯಕೃತ್ (ಲಿವರ್) ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು ಪುಟ್ಟ ಮಗುವಿನ ಚಿಕಿತ್ಸೆಗೆ ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ಸೇವಾ ಟ್ರಸ್ಟ್ ವತಿಯಿಂದ ಧನ ಸಹಾಯ ಹಸ್ತಾಂತರಿಸಲಾಯಿತು.
ಟ್ರಸ್ಟ್ ಸದಸ್ಯ ಕೆ.ವೈ.ಸುಬ್ರಹ್ಮಣ್ಯ ಭಟ್ ಅವರು ಮಗುವಿನ ತಾಯಿಗೆ ಶ್ರೀ ದೇವರ ಪ್ರಸಾದ ಮತ್ತು ಧನ ಸಹಾಯ ಹಸ್ತಾಂತರಿಸಿ ಸಂತೈಸಿದರು. ಟ್ರಸ್ಟ್ ಖಜಾಂಚಿ ಶ್ರೀನಿವಾಸ ಪ್ರಸಾದ ಶಿರಂತಡ್ಕ, ಸದಸ್ಯರಾದ ಗಣಪತಿ ಭಟ್ ಸೆಟ್ಟಿಬೈಲು ಮತ್ತು ಚಂದ್ರಶೇಖರ ಭಟ್ ಕೋಟೆ, ಪುಟಾಣಿಯ ಅಜ್ಜ ಮುಳಿಗದ್ದೆ ಪಾದೆಮನೆಯ ಸೋಮಪ್ಪ ಪೂಜಾರಿ, ಮಾವಂದಿರಾದ ಹರೀಶ್ ಮತ್ತು ಗಿರೀಶ್, ಚಿಕ್ಕಪ್ಪ ಹೊಸಗದ್ದೆಯ ಶ್ರೀಧರ್ ಹಾಗೂ ಮನೆಯವರು ಉಪಸ್ಥಿತರಿದ್ದರು.


