ಉಪ್ಪಳ : ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಶ್ರೀ ಅಯ್ಯಪ್ಪ ಭಜನಾ ಮಂದಿರ ಅಗರ್ತಿಮೂಲೆ ಬೇಕೂರು ಆಶ್ರಯದಲ್ಲಿ ಯಕ್ಷಗುರು ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ ಇವರು ಅಗರ್ತಿಮೂಲೆ ಗೀತಾ ನಿವಾಸದಲ್ಲಿ ನಡೆಸುತ್ತಿದ್ದ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭವನ್ನು ಇತ್ತೀಚೆಗೆ ಗೌರಿ ಗಣೇಶ ಭಜನಾ ಮಂದಿರ ಪ್ರತಾಪನಗರ ಮಂಗಲ್ಪಾಡಿಯಲ್ಲಿ ನಡೆಸಲಾಯಿತು.
ಸಮಾರಂಭದ ಅಂಗವಾಗಿ ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಸ್ಥೆಯ ವತಿಯಿಂದ 'ಶ್ರೀಕೃಷ್ಣ ಪರಂದಾಮ' ಯಕ್ಷಗಾನ ತಾಳಮದ್ದಳೆ ಜರಗಿದ್ದು ಜನಮನರಂಜಿಸುವಲ್ಲಿ ಯಶಸ್ವಿಯಾಗಿತ್ತು.
ದಿವಾಣ ಶಿವಶಂಕರ ಭಟ್ ಹಾಗೂ ಡಾ.ರತ್ನಾಕರ ಮಲ್ಲಮೂಲೆ ಇವರ ಮಾರ್ಗದರ್ಶನದಲ್ಲಿ ನಡೆದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರು ರಾಜಾರಾಮ ಹೊಳ್ಳ ಕೈರಂಗಳ, ಹಾಗೂ ರಾಮ ಸಾಲಿಯಾನ್ ಮಂಗಲ್ಪಾಡಿ, ಚೆಂಡೆಯಲ್ಲಿ ಕೃಷ್ಣ ಮಂಗಲ್ಪಾಡಿ, ಮದ್ದಳೆ ಜಗದೀಶ ಮಂಗಲ್ಪಾಡಿ ಭಾಗವಹಿಸಿದ್ದು, ಅರ್ಥಧಾರಿಗಳಾಗಿ ಶ್ರೀಕೃಷ್ಣನಾಗಿ ಕಾರ್ತಿಕ್ ಪಡ್ರೆ, ಅರ್ಜುನನಾಗಿ ಶಶಿಧರ ಕುದಿಂಗಿಲ, ಜರನಾಗಿ ವಿನಯ ಎಸ್ ಚಿಗುರುಪಾದೆ ಪಾತ್ರಗಳನ್ನು ನಿರ್ವಹಿಸಿದರು.


