ಉಪ್ಪಳ:ಯಕ್ಷಗಾನ ಈ ಮಣ್ಣಿನ ಸಂಸ್ಕøತಿಯ ದ್ಯೋತಕ. ಸುಸಂಸ್ಕøತವಾದ ಸಮಾಜದಲ್ಲಿ ಬಾಳಿ ಬದುಕಲು ಈ ಕಲೆಯು ಸಹಕಾರಿ. ಈ ಕಲೆಯನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ, ಕವಿ, ಸಾಹಿತಿ ಯೋಗೀಶ ರಾವ್ ಚಿಗುರುಪಾದೆ ಅಭಿಪ್ರಾಯಪಟ್ಟರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಬೇಕೂರು ಅಗರ್ತಿಮೂಲೆ ಶ್ರೀಅಯ್ಯಪ್ಪ ಭಜನಾ ಮಂದಿರದ ಆಶ್ರಯದಲ್ಲಿ ಯಕ್ಷಗುರು ರಾಮ ಸಾಲಿಯಾನ್ ಮಂಗಲ್ಪಾಡಿ ಇವರು ಅಗರ್ತಿಮೂಲೆ ಗೀತಾ ನಿವಾಸದಲ್ಲಿ ನಡೆಸುತ್ತಿದ್ದ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮ ಸಮಾರೋಪದ ಅಂಗವಾಗಿ ಗೌರವಾರ್ಪಣೆ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭವನ್ನು ಪ್ರತಾಪ ನಗರದ ಗೌರಿ ಗಣೇಶ ಭಜನಾಮಂದಿರದಲ್ಲಿ ಏರ್ಪಡಿಸಲಾಗಿತ್ತು. 'ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಸಂಗ ಪಠ್ಯ ಹಾಗೂ ಯಕ್ಷಗಾನ ಸಂಬಂಧಿ ಪುಸ್ತಕಗಳ ಪ್ರಕಾಶನ, ಮುದ್ರಣ, ಹಿರಿಯರ ನೆನಪು, ವಿವಿಧ ತರಬೇತಿ ಕಾರ್ಯಕ್ರಮಗಳು, ದಾಖಲೀಕರಣ, ಹಿರಿಯಕಲಾವಿದರ ಬದುಕು ಬರಹಗಳ ಬಗ್ಗೆ ಸಾಕ್ಷಚಿತ್ರನಿರ್ಮಾಣ, ಹಾಗೂ ಶೈಕ್ಷಣಿಕ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಯಕ್ಷಗಾನ ಸಂಘಟನೆ, ಸಂಶೋಧನಾ ಕೇಂದ್ರಗಳು ಹಾಗೂ ಯಕ್ಷಗಾನ ಕಲಾವಿದರು ಯಕ್ಷಗಾನ ಪ್ರೇಮಿಗಳು ಅಕಾಡೆಮಿಯೊಂದಿಗೆ ಕೈಜೋಡಿಸ ಬೇಕಿದೆ ಎಂದು ಅಕಾಡೆಮಿ ಕಾರ್ಯ ಯೋಜನೆಗಳ ಬಗ್ಗೆ ಯೋಗೀಶ ರಾವ್ ಈ ಸಂದರ್ಭ ಮಾಹಿತಿ ನೀಡಿದರು.
ಯೋಗೀಶ ರಾವ್ ಚಿಗುರುಪಾದೆ ಯವರಿಗೆ ಗಣ್ಯರ ಸಮಕ್ಷಮ ಸನ್ಮಾನಿಸಿ ಅಭಿನಂದಿಸಲಾಯಿತು. ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ರತ್ನಾಕರ ಮಲ್ಲಮೂಲೆ ಯೋಗೀಶರಾವ್ ಬಗೆಗೆ ಅಭಿನಂದನಾ ಭಾಷಣ ಮಾಡಿದರು. ರಾಮ ಸಾಲಿಯಾನ್ ಸನ್ಮಾನ ಪತ್ರ ವಾಚಿಸಿದರು.
ಸಮಾರಂಭದಲ್ಲಿ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಯಿಕಟ್ಟೆ ಹಾಗೂ ಯಕ್ಷಗಾನ ಕೇಂದ್ರದ ಅಧ್ಯಕ್ಷ ಸುದರ್ಶನಪಾಣಿ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷರಂಗ ದೇರಳಕಟ್ಟೆ ಇದರ ಅಧ್ಯಕ್ಷೆ ಕಿಶೋರಿ ಆರ್ ಶೆಟ್ಟಿ, ಯಕ್ಷಗಾನ ಹಿರಿಯ ಕಲಾವಿದರಾದ ಪರಪು ನಾರಾಯಣ ಶೆಟ್ಟಿ, ಗೌರಿ ಗಣೇಶ ಭಜನಾಮಂದಿರ ಪ್ರತಾಪ ನಗರ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ ಆಳ್ವ ತಿಂಬರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಗುರು ರಾಮ ಸಾಲಿಯಾನ್ ಮಂಗಲ್ಪಾಡಿ ಗೌರವ ಉಪಸ್ಥಿತರಿದ್ದರು.
ಕುಮಾರಿ ಶ್ರೀಹಿತಾ ಆರ್ ಶೆಟ್ಟಿ ಪ್ರಾರ್ಥನೆ ಗೈದರು. ಅಧ್ಯಾಪಕ ಸುರೇಶ್ ಮಂಗಲ್ಪಾಡಿ ಸ್ವಾಗತಿಸಿ, ಯುವ ಶಿಕ್ಷಕ, ದೈವನರ್ತಕ ಸುಜಿತ್ ಕುಮಾರ್ ನಿರೂಪಿಸಿದರು. ಅಧ್ಯಾಪಕ ಕೆ.ಬಿ.ನಾಭ ಐಲ ವಂದಿಸಿದರು. ಬಳಿಕ ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಸ್ಥೆಯ ವತಿಯಿಂದ 'ಶ್ರೀಕೃಷ್ಣ ಪರಂಧಾಮ' ಯಕ್ಷಗಾನ ತಾಳಮದ್ದಳೆ ಜರಗಿತು.


