ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಬೃಹತ್ ಯೋಜನೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣದ ಕಾಮಗಾರಿ ಇತ್ತೀಚೆಗೆ ಆರಂಭಗೊಂಡಿತು. ಮೊದಲ ಹಂತದ ಕಾಮಗಾರಿ ಪಿಲ್ಲರ್, ಫೌಂಡೇಶನ್, ಹಾಗೂ ಮೊದಲ ಅಂತಸ್ತಿನವರೆಗೆ ಕಾಮಗಾರಿಯ ಜವಾಬ್ದಾರಿಯನ್ನು ಅನುಭವಿ ಅಭಿಯಂತರ ಶಿವಶಂಕರ್ ವಹಿಸಿಕೊಂಡಿದ್ದು, ಜೂನ್ ಮೊದಲ ವಾರದೊಳಗಾಗಿ ಮೊದಲ ಹಂತ ಪೂರೈಸುವ ಗುರಿ ಹೊಂದಲಾಗಿದೆ.
ಟ್ರಸ್ಟ್ ನ ಖಜಾಂಜಿ ಲಕ್ಷ್ಮೀನಾರಾಯಣ, ಸದಸ್ಯರಾದ ಸತೀಶ ಅಡಪ ಸಂಕಬೈಲು, ರಾಜಾರಾಮ ರಾವ್ ಮೀಯಪದವು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸದಾಶಿವ ಭಟ್ ಎದುರ್ಕಳ, ಸುನೀತಾ ಶೆಟ್ಟಿ, ಜಯರಾಮ ಕಾರಂತ ದೇಶಮಂಗಲ, ಯೋಗೀಶ ರಾವ್ ಚಿಗುರುಪಾದೆ, ತಿಮ್ಮಪ್ಪ ಮಜಲು ಸಲಹೆ ಸಹಕಾರ ನೀಡುತ್ತಿದ್ದು ದಾನಿಗಳು ಯೋಜನೆಗೆ ಉತ್ಸಾಹದಿಂದ ಕೈಜೋಡಿಸುತ್ತಿರುವುದಾಗಿ ಪ್ರತಿಷ್ಠಾನ ತಿಳಿಸಿದೆ.


