ಮಧೂರು: ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಾಲಯಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಶೃಂಗೇರಿ ಶ್ರೀಶಾರದಾ ಪೀಠದ ಮಜ್ಜಗದ್ಗುರು ಶ್ರೀವಿಭುದೇಶತೀರ್ಥ ಪಾದಂಗಳನ್ನು ಅನಂತಪುರ ಕನ್ನಡ ಸಿರಿ ಸಮ್ಮೇಳನದ ಪದಾಧಿಕಾರಿಗಳು ಭೇಟಿಯಾಗಿ ವಿಜ್ಞಾಪನಾ ಪತ್ರ ಸಮರ್ಪಿಸಿ ಆಶೀರ್ವಾದ ಬೇಡಲಾಯಿತು. ಈ ಸಂದರ್ಭ ಅನುಗ್ರಹ ಸಂದೇಶ ನೀಡಿದ ಶ್ರೀಗಳು ಕನ್ನಡ ಸಿರಿ ಸಮ್ಮೇಳನ ಯಶಸ್ವಿಯಾಗಲಿ. ಶೃಂಗೇರಿ ಪೀಠದ ಪೂರ್ಣಾನುಗ್ರಹ ಕಾರ್ಯಕ್ರಮಕ್ಕೆ ಇದೆ ಎಂದು ಆಶೀರ್ವದಿಸಿ ಅನುಗ್ರಹಿಸಿದರು.
ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ., ಪದಾಧಿಕಾರಿಗಳಾದ ಪ್ರೊ.ಎ.ಶ್ರೀನಾಥ್, ತಾರಾನಾಥ ಮಧೂರು ಮೊದಲಾದವರು ಉಪಸ್ಥಿತರಿದ್ದರು.


