ಕುಂಬಳೆ: ಕಾರಿಂಜ ಇಚ್ಲಂಪಾಡಿ ಶ್ರೀ ಮಹಾದೇವ ಶಾಸ್ತಾರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.8 ಮತ್ತು 9 ರಂದು ವಿವಿಧ ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಮಾ.8 ರಂದು ಭಾನುವಾರ ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ, 8 ರಿಂದ ಶ್ರೀ ನಂದನ ಮಹಿಳಾ ಭಜನಾ ಸಂಘ ಸೂರಂಬೈಲು ಇವರಿಂದ ಭಜನೆ, 10 ಕ್ಕೆ ನವಕಾಭಿಷೇಕ, 11:30 ರಿಂದ ಮಹಾದೇವಿ ಮಹಿಳಾ ಭಜನಾ ಮಂಡಳಿ, ಕಳತ್ತೂರು ಇವರಿಂದ ಭಜನಾ ಕಾರ್ಯಕ್ರಮ, 12:30 ಕ್ಕೆ ನೂತನವಾಗಿ ನಿರ್ಮಾಣಗೊಂಡಿರುವ ವಸಂತ ಶಿಲಾ ಮಂಟಪವನ್ನು ಇಚ್ಲಂಪಾಡಿ ತರವಾಡಿನಿಂದ ಸನ್ನಿಧಿಗೆ ಸಮರ್ಪಣೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಅಪರಾಹ್ನ 3 ರಿಂದ ನಾಯ್ಕಾಪು ವಿಘ್ನೇಶ್ವರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 8ರಿಂದ ಕಾಳಿಕಾಂಬಾ ಭಜನಾ ಮಂಡಳಿ ಆರಿಕ್ಕಾಡಿ ಇವರಿಂದ ಭಜನೆ, ರಾತ್ರಿ ಭೋಜನ, ದೀಪಾರಾಧನೆ, ತಾಯಂಬಕ, ಪೂಜೆ, ಶ್ರೀ ಭೂತಬಲಿ, ಬೆಡಿ ಸೇವೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಮಂತ್ರಾಕ್ಷತೆಗಳು ನಡೆಯಲಿವೆ.
ಮಾ.9 ರಂದು ಸೋಮವಾರ ಮುಂಜಾನೆ ರಕ್ತೇಶ್ವರಿ ದೈವದ ಕೋಲ, ಪ್ರಸಾದ ವಿತರಣೆ, ಪ್ರಾತಃಕಾಲ ಪೂಜೆ, ಬೆಳಗ್ಗೆ ನಾಗ ಹಾಗೂ ವನ ದೇವತೆಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನದ ಬಳಿಕ ಆನಾಡಿಪಳ್ಳದಲ್ಲಿ 29 ದೈವಗಳ ತಂಬಿಲ ಜರಗಲಿರುವುದು. ಜಾತ್ರಾ ಮಹೋತ್ಸವದಲ್ಲಿ ಭಕ್ತಾಭಿಮಾನಿಗಳೆಲ್ಲ ಪಾಲ್ಗೊಳ್ಳಬೇಕಾಗಿ ದೇವಳದ ಆಡಳಿತ ಮೊಕ್ತೇಸರರು ವಿನಂತಿಸಿದ್ದಾರೆ.

