ಉಪ್ಪಳ: ಹದಿಹರೆಯದ ಸಮಸ್ಯೆಗಳು ಹಾಗೂ ಅವರ ವಿದ್ಯಾರ್ಥಿ ಜೀವನವನ್ನು ಬೆಸೆದು ಸಮಗ್ರಶಿಕ್ಷಾ ಕೇರಳ ಸಂಯೋಜಿಸಿರುವ ಯುವತರಂಗ ದೃಶ್ಯರೂಪಕದ ಕಾಸರಗೋಡು ಜಿಲ್ಲಾಮಟ್ಟದ ಶಾಲಾ ಪರ್ಯಟನೆಯ ಭಾಗವಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಾರ್ಯಕ್ರಮ ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ಕಾಸರಗೋಡು ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಪೈವಳಿಕೆ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸುನಿತ ವಾಲ್ಟಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾಮಪಂಚಾಯತಿ ಅಧ್ಯಕ್ಷೆ ಭಾರತಿ ಜೆ ಶೆಟ್ಟಿ ದಿವ್ಯಚೇತನ ವಿದ್ಯಾರ್ಥಿಗಳಿಗಿರುವ ವಿಶೇಷ ಕಿಟ್ ವಿತರಿಸಿದರು. ಪೈವಳಿಕೆ ಗ್ರಾಮಪಂಚಾಯತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರ, ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ದಿನೇಶ್ ವಿ, ಪೈವಳಿಕೆನಗರ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ, ಮುಖ್ಯಶಿಕ್ಷಕ ಇಬ್ರಾಹಿಂ ಬುಡ್ರಿಯ ಶುಭಾಶಂಸನೆಗೈದರು. ಸರ್ವಶಿಕ್ಷಾ ಅಭಿಯಾನ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ನಾರಾಯಣ ದೇಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜೇಶ್ವರ ಬಿ ಆರ್ ಸಿ ಯೋಜನಾಧಿಕಾರಿ ಆದರ್ಶ್ ಪಿ ಸ್ವಾಗತಿಸಿ, ಅಶ್ರಫ್ ಮತ್ರ್ಯ ವಂದಿಸಿದರು. ಪ್ರವೀಣ್ ಕನಿಯಾಲ ನಿರೂಪಿಸಿದರು. ವಿವಿಧ ತರದ ಕಲಾಚಟುವಟಿಕೆಗಳು, ಕಿರುನಾಟಕ, ನೃತ್ಯ, ಹಾಡುಗಳ ಮೂಲಕ ಮಾದಕ, ನವಮಾಧ್ಯಮ, ಲಿಂಗಸಮತ್ವ, ಪೋಷಕಾಹಾರ ಇತ್ಯಾದಿ ವಿಷಯಗಳಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ಜಾಗೃತಿ ನೀಡಲಾಯಿತು. ಸರ್ವಶಿಕ್ಷಾ ಅಭಿಯಾನದ ವಿಶೇಷ ಅಧ್ಯಾಪಕ ವರದರಾಜ್ ಬಾಯಾರು, ಪ್ರಕಾಶ್ ಕುಂಬಳೆ, ವಿದ್ವಾನ್ ರವೀಂದ್ರ ಅಡ್ಕ, ಸುಮೇಶ್ ಬಾಬು, ಮನೋಜ್ ಕುಮಾರ್, ಪ್ರವೀಣ್ ಕುಮಾರ್, ಪ್ರೀತ, ಸುಮ, ಥೋಮಸ್ ಕೆ ಟಿ, ನಿಸ್ಸಿ ಮಾಥ್ಯೂ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.


