ಕುಂಬಳೆ: ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ತಾಂತ್ರಿಕ ,ವೈದಿಕ ಕಾರ್ಯಕ್ರಮಗಳು ಗುರುವಾರ ಜರಗಿದವು. ಪುರೋಹಿತ ಕೆ.ರಾಮಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ಶ್ರೀಗುರು ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕ ನಾಂದಿ ಸ್ಥಾಪನೆ, ಕೌತುಕ ಬಂಧನ, ನವಗ್ರಹ ಪೂಜೆ, ಅಂಕುರಾರೋಹಣ ನಡೆಯಿತು. ರಾತ್ರಿ ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಸುದರ್ಶನ ಹೋಮ, ಪ್ರಾಸಾದ ಶುದ್ದಿ ಮೊದಲಾದ ವಿಧಿವಿಧಾನಗಳು ನೆರವೇರಿದವು.ಹಲವಾರು ಋತ್ವಿಜರು ಹೋಮ ಹವನಗಳಿಗೆ ಸಹಭಾಗಿತ್ವ ನೀಡಿದರು.
ಶುಕ್ರವಾರ ಬೆಳಿಗ್ಗೆ 7 ರಿಂದ ಶ್ರೀಗುರುಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿಪೂಜೆ, ಅಂಕುರಪೂಜೆ, ನವಗ್ರಹ ಪೂಜೆ, ಮಹಾಗಣಪತಿಹೋಮ, ಶ್ರೀದೇವರ ಉಷಃಪೂಜೆ ಮೊದಲಾದ ತಾಂತ್ರಿಕ, ವೈದಿಕ ವಿಧಿವಿಧಾನಗಳು ಜರಗಿದ್ದು ಹಲವಾರು ಭಕ್ತ ಜನತೆ ಪಾಲ್ಗೊಂಡು ಬ್ರಹ್ಮಕಲಶೋತ್ಸವದ ದೇವತಾ ಕಾರ್ಯದಲ್ಲಿ ಭಾಗವಹಿಸಿ ಕೃತಾರ್ಥರಾದರು.


