ಕಾಸರಗೋಡು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್‍ನ ಮಹಿಳಾ ಘಟಕ ಸಹಯೋಗದೊಂದಿಗೆ ಸಾಮೂಹಿಕ ಓಟ ಕಾರ್ಯಕ್ರಮ ಕಾಸರಗೋಡಿನಲ್ಲಿ ಜರುಗಿತು. ನಗರದ ಹೊಸ ಬಸ್‍ನಿಲ್ದಾಣ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಡಿವೈಎಸ್‍ಪಿ ಹಸೈನಾರ್ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ವನಿತಾ ಸೆಲ್ ಸಿ.ಐ ಭಾನುಮತಿ ಸಿ, ಕೆ.ಶ್ರೀಧರನ್, ಜೋಸ್ ಫ್ರಾನ್ಸಿಸ್, ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಚೆಮ್ನಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ಪೊಲೀಸ್ ಕ್ಯಾಡೆಟ್‍ಗಳು ಪಾಲ್ಗೊಂಡಿದ್ದರು.

