ಕಾಸರಗೋಡು: ಹಸಿರು ಕೇರಳ ಜಿಲ್ಲಾ ಮಿಷನ್‍ನಲ್ಲಿ ಇಂಟರ್ನ್‍ಶಿಪ್‍ಗೆ ಅವಕಾಶವಿದೆ. ಪರಿಸರ ವಿಜ್ಞಾನ, ಜೀವಶಾಸ್ತ್ರ, ಸಮಾಜವಿಜ್ಞಾನ, ಸಮಾಜ ಕಾಯಕ, ರಸಾಯನ ಶಾಸ್ತ್ರ, ಬಾಟನಿ ಸಹಿತ ವಲಯಗಳಲ್ಲಿ ಸ್ನಾತಕೋತ್ತರ ಪದಪಡೆದವರು, ಸಿವಿಲ್‍ಇಂಜಿನಿಯರಿಂಗ್, ಜರ್ನಲಿಸಂ ಸ್ನಾತಕೋತ್ತರ ಪದವಿ ಯಾ ಪಿ.ಜಿ.ಡಿಪೆÇ್ಲಮಾ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಈ ಸಂಬಂಧ ಸಂದರ್ಶನ ಮಾ.5ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾದಿಕಾರಿಕಚೇರಿಯ ಹಸಿರು ಕೇರಳ ಮಿಷನ್ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ. 6 ತಿಂಗಳ ಅವಧಿಯಲ್ಲಿ ಇಂಟರ್ನ್ ಶಿಪ್ ಇರುವುದು. ಈ ಅವಧಿಯಲ್ಲಿ ಸರ್ಕಾರ ಅಂಗೀಕೃತ ಗೌರವಧನ ಲಭಿಸಲಿದೆ.
ಕಂತು ಪಾವತಿ:
ಕೇರಳ ಮದ್ರಸಾ ಶಿಕ್ಷಕ ಕಲ್ಯಾಣನಿಧಿಯಲ್ಲಿ 2019-2020 ಆರ್ಥಿಕ ವರ್ಷದ ಕಂತು ಪಾವತಿಗೆ ಮಾ.10ಕೊನೆಯ ದಿನವಾಗಿದೆ ಎಂದು ಕಲ್ಯಾಣನಿಧಿ ಮೆನೆಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

