ಮುಳ್ಳೇರಿಯ: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಇಂದಿನಿಂದ 13ರ ವರೆಗೆ ಜರುಗಲಿದೆ.
ಜಾತ್ರೋತ್ಸವದ ಅಂಗವಾಗಿ ಇಂದು ಬೆಳಗ್ಗೆ ಪ್ರಾತಃಕಾಲ ಉಧ್ವಾರ್ಚನೆ, ಮಹಾನೈವೇದ್ಯ ಸಮರ್ಪಣೆ, ಮಹಾಪೂಜೆ, ಪ್ರಸಾದ ಸ್ವೀಕಾರ, ರಾತ್ರಿ ಸಭಿಕರ ಕೂಡುವಿಕೆ, ಮಹಾಪೂಜೆ, ಪ್ರಸಾದ ಸ್ವೀಕಾರ. ಪ್ರಾರ್ಥನಾ ಪರೀಕ್ಷೆ, ಉತ್ಸವ ಸಾಮಾಗ್ರಿಗಳ ಶೇಖರಣೆ, ಮಾ.9ರಂದು ಬೆಳಗ್ಗೆ 9.30ರಿಂದ 10.30ರ ಮಧ್ಯೆ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ರಿಂದ ಐತ್ತನಡ್ಕ ಶ್ರೀ ಗಣೇಶ ಭಜಕ ವೃಂದದ ಭಜನಾ ಸಂಕೀರ್ತನೆ, 8.30ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಮಾ.10ರಂದು ಬೆಳಗ್ಗೆ 8.30ಕ್ಕೆ ಶ್ರೀ ದೇವರ ಬಲಿ ಉತ್ಸವ, ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ.ರಾತ್ರಿ8ರಿಂದ ಬೆಳ್ಳೂರು ಲಕ್ಷ್ಮಿಪಾರ್ವತಿ ಭಜನಾ ಸಂಘದ ಭಜನೆ, 8.30ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಮಾ.11ರಂದು ಬೆಳಗ್ಗೆ ಗಂಟೆ 8.30ಕ್ಕೆ ಶ್ರೀ ದೇವರ ಬಲಿ ಉತ್ಸವ, ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ರಿಂದ ಕಲ್ಲಗ ಶಿವಗಿರಿ ಫ್ರೆಂಡ್ಸ್' ಅವರ 'ಸಾಂಸ್ಕೃತಿಕ ವೈಭವ', ಕಾಸರಗೋಡು ಪುಲ್ಕುರು ಭಜನ್ ಸಾಮ್ರಾಟ್ ಇವರಿಂದ 'ಭಜನ್ ಸಂಧ್ಯಾ' ಕಾರ್ಯಕ್ರಮ, 8.30ಕ್ಕೆ ಶ್ರೀ ದೇವರ ನಡುದೀಪೆÇೀತ್ಸವ, ಮಾ.12ರಂದು ಬೆಳಗ್ಗೆ 8.30ಕ್ಕೆ ಶ್ರೀ ದೇವರ ಬಲಿ ಉತ್ಸವ, ಭಜಕರ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ.ರಾತ್ರಿ 8ರಿಂದ ಮರದಮೂಲೆ ಶ್ರೀ ಹರಿನಾಮಾಮೃತ ಭಜನಾ ಮಂಡಳಿ ಮಕ್ಕಳ ಸಂಘದ ಭಜನಾ ಸಂಕೀರ್ತನೆ, 8.30ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಶ್ರೀ ದೇವರ ಶಯನ, ಮಾ.13ರಂದು ಬೆಳಗ್ಗೆ 9ಕ್ಕೆ ಸಭಿಕರ ಕೂಡುವಿಕೆಯಿಂದ ಪ್ರಾರ್ಥನೆ, ಶಯನೋದ್ಘಾಟನೆ ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 8ರಿಂದ ರಿಯಲ್ ಫ್ರೆಂಡ್ಸ್ ಸಮರ್ಪಿಸುವ ನೃತ್ಯವೈಭವ, ರಿಯಾ ರಾಮ್ ಕಳ್ವಾಜೆ ಇವರಿಂದ ಭಕ್ತಿ ರಸಮಂಜರಿ, ಮಂಗಳೂರು ಲೋಲಾಕ್ಷ ಜಾದೂ ಅವರ ಜಾದೂ ಪ್ರದರ್ಶನ, ದಶಮಾನದ ಸಂಭ್ರಮದಲ್ಲಿರುವ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ವಿದ್ಯಾರ್ಥಿಗಳಿಂದ ಸವ್ಯಸಾಚಿ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ನಿರ್ದೇಶನದಲ್ಲಿ 'ಭೌಮಾಸುರ'–'ಶ್ರೀ ಹರಿದರ್ಶನ' ಯಕ್ಷಗಾನ ಪ್ರದರ್ಶನ, ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಅವಭೃತ ಸ್ವಾನ, ಶ್ರೀ ದುರ್ಗಾಸೇವೆ, ವಿಶೇಷ ಬೆಡಿಸೇವೆ, ಶ್ರೀ ದೇವರ ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ಮಾ.14ರಂದು ಧ್ವಜಾವರೋಹಣ, ಮಂಗಳಾರತಿ, ನವಕಾಭಿಷೇಕ, ಮಂತ್ರಾಕ್ಷತೆ,ಮಾ.15ರಂದು ಸಂಜೆ 4ಕ್ಕೆ ಶ್ರೀ ದೇವರ ಪ್ರಧಾನ ದೈವ ಹುಲಿಭೂತ ಮತ್ತು ಪಟ್ಟದ ಅರಸು ಬಿರ್ನಾಳ್ವ ದೈವಗಳ ನೇಮನೃತ್ಯ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.


