ಪೆರ್ಲ: ಶೇಣಿ ಮಣಿಯಂಪಾರೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ ಶನಿವಾರ ಜರಗಿತು.
ಈ ಸಂದರ್ಭದಲ್ಲಿ ಮಂದಿರದ ಅಭಿವೃದ್ಧಿಯ ಕೆಲಸ ಕಾರ್ಯಗಳ ಬಗ್ಗೆ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಲಾಯಿತು. ಶೇಣಿ ಶ್ರೀಶಾರದಾಂಬ ಶಾಲಾ ಪ್ರಬಂಧಕ ಸೋಮಶೇಖರ್ ಜೆ.ಎಸ್. ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ಮಂದಿರದ ಸೇವಾ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯಕ್ ತೋಟದಮನೆ,ಮಂದಿರದ ಗುರುಸ್ವಾಮಿ ನಾರಾಯಣ ಮೂಲ್ಯ ಬಾರೆದಳ, ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಬಿ.ಪಿ.ಶೇಣಿ,ಧಾರ್ಮಿಕ ಮುಂದಾಳು ಸುರೇಶ್ ಕೆದ್ರೋಳಿ,ಪದ್ಮನಾಭ ಆಚಾರ್ಯ ಬಾಡೂರು ಮೊದಲಾದವರು ಉಪಸ್ಥಿತರಿದ್ದರು. ಅಭಿವೃದ್ಧಿ ಕಾರ್ಯದ ಸಹಾಯ ನಿಧಿ ಸಂಗ್ರಹ ಪ್ರಥಮ ಕೂಪನ್ ಹೇಮಾವತಿ ಟೀಚರ್ ಮಣಿಯಂಪಾರೆಗೆ ಹಸ್ತಾಂತರಿಸಲಾಯಿತು. ಶರಶ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿ ಬಾಲಕೃಷ್ಣ ಏಳ್ಕಾನ ವಂದಿಸಿದರು.


