HEALTH TIPS

ವಿಶ್ವದೆಲ್ಲೆಡೆ ಕೊರೋನಾ ಆರ್ಭಟ: ಸಾವಿನ ಸಂಖ್ಯೆ 184,186ಕ್ಕೆ ಏರಿಕೆ, 2,636,989 ಮಂದಿಯಲ್ಲಿ ಸೋಂಕು ಪತ್ತೆ

   
       ಲಂಡನ್: ವಿಶ್ವದಾದ್ಯಂತ ಕೊರೋನಾ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ವೈರಸ್'ಗೆ ಈ ವರೆಗೂ 184,186 ಮಂದಿ ಬಲಿಯಾಗಿದ್ದಾರೆ. ಅಲ್ಲದೆ ಸೋಂಕಿತರ ಸಂಖ್ಯೆ 2,636,989ಕ್ಕೆ ಏರಿಕೆಯಾಗಿದೆ.
      ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲೂ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ.. ಈಗಾಗಲೇ ವಿಶ್ವಾದ್ಯಂತ ಕೊರೋನಾ ವೈರಸ್?ನಿಂದ 1.84 ಲಕ್ಷ ಜನರು ಸಾವನ್ನಪ್ಪಿದ್ದಾರೆ. 26.36 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದೆ. ಅವರಲ್ಲಿ 7.9 ಲಕ್ಷ ಜನರು ಚಿಕಿತ್ಸೆ ಪಡೆದು, ಗುಣಮುಖರಾಗಿ  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಸೋಂಕಿತ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 8.52 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ ಅಮೆರಿಕದಲ್ಲಿ 47,750 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. 2ನೇ ಸ್ಥಾನದಲ್ಲಿರುವ ಸ್ಪೇನ್?ನಲ್ಲಿ 2,08,389 ಲಕ್ಷ ಜನರಿಗೆ ಸೋಂಕು ಪತ್ತೆಯಾಗಿದ್ದು,  21,283 ಜನ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,141ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು ಅಮೆರಿಕದಲ್ಲಿ ಕೊರೋನಾ ವೈರಸ್ ಗೆ ನಿತ್ಯ 2 ಸಾವಿರ ಮಂದಿ ಬಲಿಯಾಗುತ್ತಿದ್ದು, ಇದೇ ಕಾರಣಕ್ಕೆ ನ್ಯೂಯಾರ್ಕ್ ಗವರ್ನರ್ ಕೋವಿಡ್-19 ಪರೀಕ್ಷಾ ಸಾಮಥ್ರ್ಯವನ್ನು ದುಪ್ಪಟ್ಟುಗೊಳಿಸಿದ್ದಾರೆ.
      ಇಟಲಿಯಲ್ಲಿ ಸೋಂಕಿತರ ಸಂಖ್ಯೆ 1,87,327 ಕ್ಕೆ ಏರಿಕೆಯಾಗಿದ್ದು, 24,648 ಮಂದಿ ಸಾವನ್ನಪ್ಪಿದ್ದಾರೆ.  ಜರ್ಮನಿಯಲ್ಲಿ 1,50,648 ಲಕ್ಷ ಜನರಿಗೆ ಕೊರೋನಾ ಸೋಂಕಿದೆ. 5,315 ಜನರು ಮೃತಪಟ್ಟಿದ್ದಾರೆ. ಫ್ರಾನ್ಸ್  ನಲ್ಲಿ 1,19,151 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 21,340 ಮಂದಿ ಸಾವನ್ನಪ್ಪಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries