ಕಾಸರಗೋಡು: ಕೋವಿಡ್ 19 ಬಾಧಿತರು ಅತ್ಯಧಿಕ ಸಂಖ್ಯೆಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಪೆÇಲೀಸ್ ಕ್ರಮವನ್ನು ಬಿಗಿಗೊಳಿಸಲಾಗಿದೆ. ಚೆಂಗಳ, ಮೊಗ್ರಾಲ್ಪುತ್ತೂರು, ಚೆಮ್ನಾಡ್, ಮಧೂರು, ಉದುಮಾ, ಪಳ್ಳಿಕ್ಕರೆ ಗ್ರಾಮಪಂಚಾಯತ್ ಗಳ ವ್ಯಾಪ್ತಿಯಲ್ಲಿ ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿ ಪ್ರದೇಶಗಳಲ್ಲಿ ಕೋವಿಡ್ 19 ಬಾಇತರು ಅತ್ಯಧಿಕ ಪ್ರಮಾಣದಲ್ಲಿದ್ದಾರೆ. ಈ ಪ್ರದೇಶಗಳನ್ನು ಕೋವಿಡ್ ಕಂಟಿಯನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಈ ಪ್ರದೇಶದ ಜನ ಮನೆಗಳಿಂದ ಹೊರಗಿಳಿಯಕೂಡದು ಎಂದು ಐ.ಜಿ. ವಿಜಯ್ ಸಖಾರೆ ಆದೇಶ ನೀಡಿರುವರು.
ಅನಿವಾರ್ಯ ಸಾಮಾಗ್ರಿಗಳನ್ನು ಮತ್ತು ಔಷಧಗಳನ್ನು ಪೆÇಲೀಸರು ಮನೆಗಳಿಗೇ ತಲಪಿಸುವರು. ಸಂಚಾರವನ್ನು ಪೆÇಲೀಸರು ಕಡ್ಡಾಯವಾಗಿ ನಿಯಂತ್ರಿಸಿದ್ದಾರೆ. ಈ ವಲಯಗಳಲ್ಲಿ ಪೆÇಲೀಸ್ಡ್ರೋನ್ ನಿಗಾ ಆರಂಭಿಸಲಾಗಿದೆ. ಮನೆಗಳಿಂದ ಹೊರಗಿಳಿಯುವವರ ವಿರುದ್ಧ ಪೆÇಲೀಸರು ಕೇಸು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಜಿಲ್ಲಾಡಳಿತೆ ಸಿದ್ಧಪಡಿಸಿದ ಕೊರೋನಾ ಕೇರ್ ಸೆಂಟರ್ ಗಳಿಗೆ ಸರಕಾರಿ ಕ್ವಾಂಟಿಯಿನಿಲ್ ವರ್ಗಾಯಿಸಲಾಗುವುದು.
ಕೋವಿಡ್ 19 ಹೆಚ್ಚಳ ನಿಯಂತ್ರಣ ನಿಟ್ಟಿಲ್ಲಿ ಮನೆಗಳಲ್ಲೇ ಉಳಿಯಬೇಕು ಮತ್ತು ಸಾಮಾಜಿಕ ಅಂತರ ಪಾಲಿಸಬೇಕು. ರಾಜ್ಯ ಸರಕಾರದ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕೋವಿಡ್ 19 ಖಚಿತಗೊಂಡಿರುವ ಎಲ್ಲ ಪ್ರದೇಶಗಳಲ್ಲೂ ಪೆÇಲೀಸ್ಕ್ರಮ ಬಿಗಿಗೊಳಿಸಲಾಗಿದೆ. ಜಿಲ್ಲೆಯ ಎಲ್ಲ ಮನೆಗಳಲ್ಲೂ ಅನಿವಾರ್ಯ ಸಾಮಾಗ್ರಿ, ಔಷಧ ಅಗತ್ಯವಿರುವವರು ವಾಟ್ಸ್ ಆಪ್ ಸಂದೇಶ ನೀಡಿದರೆ ಸಾಕು, ಪೆÇಲೀಸರು ಮನೆಗಳಿಗೆ ಇವನ್ನು ತಲಪಿಸುವರು ಎಂದು ಐ.ಜಿ. ತಿಳಿಸಿದರು.
ನೇಮಕಗೊಂಡ ವೈದ್ಯಾಧಿಕಾರಿಗಳು:
ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಸಹಾಯಕ ಸರ್ಜನ್ ಗಳಾದ ಡಾ.ಹರಿಕೃಷ್ಣನ್ (9496820103), ಡಾ.ಸನೂಜ್(9496333577), ಎಂಬವರು ದಿನ ಬಿಟ್ಟಿ ದಿನ ರಾತ್ರಿ 8 ರಿಂದ ಬೆಳಗ್ಗೆ 8 ಗಮಟೆ ವರೆಗೆ , ಡಾ.ನಿಷಾ (8592812615) ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆ ವರೆಗೆ, ಡಾ.ಮೈಥಿಲಿ(8304812407) ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಸರ್ಟಿಫಿಕೆಟ್ ನೀಡುವ ವೈದ್ಯಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಅವರಿಂದ ನೇಮಕಗೊಂಡವರು. ಇವರ ಸೇವೆ ತಲಪ್ಪಾಡಿಯಲ್ಲಿ ಲಭ್ಯವಿರುವುದು. ಇಲ್ಲಿ 108 ಆಂಬುಲೆನ್ಸ್ ಸೇವೆಯೂ ಲಭ್ಯವಿರುವಂತೆ ಆದೇಶ ನೀಡಲಾಗಿದೆ.


