ಕಾಸರಗೋಡು: ಕೊರೋನಾ ಹಾವಳಿಯ ಹಿನ್ನೆಲೆಯಲ್ಲಿಕಾಸರಗೋಡಿನಲ್ಲಿ ಅತ್ಯಾಧುನಿಕ ಆಸ್ಪತ್ರೆ ಆರಂಭಗೊಳ್ಳಲಿದೆ. 450 ಮಂದಿಗೆ ಕ್ವಾರೆಂಟ್ ಸೌಲಭ್ಯ, 540 ಮಂದಿಗೆ ಐಸೊಲೇಷನ್ ಹಾಸುಗೆಗಗಳನ್ನು ಹೊಂದಿರುವ ಚಿಕಿತ್ಸಾ ಸೌಲಭ್ಯ (ಆಸ್ಪತ್ರೆ) ಟಾಟಾ ಸಮೂಹ ಸಂಸ್ಥೆಯ ವತಿಯಿಂದ ಶೀಘ್ರದಲ್ಲೇ ಸಜ್ಜುಗೊಳಿಸಲಾಗುವುದು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶ ಪ್ರಕಾರ ಈ ಸಂಬಂಧ ತಂಡವೊಂದು ಕಾಸರಗೋಡಿಗೆ ಆಗಮಿಸಿದೆ. ಇದಕ್ಕೆ ಬೇಕಿರುವ ಕ್ರಮಗಳನ್ನು ಚುರುಕಿನಿಂದ ಜಾರಿಗೊಳಿಸುವ ನಿಟ್ಟಿನಲ್ಲಿ ಈ ತಂಡ ಆಗಮಿಸಿದೆ.
ಚೆಮ್ನಾಡ್ ಗ್ರಾಮಪಂಚಾಯತ್ ನ ತೆಕ್ಕಿಲ್ ಗ್ರಾಮದಲ್ಲಿ ಯೋಜನೆಗೆ ಪೂರಕವಾದ ಜಾಗವಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಸಮಗ್ರ ಮಾತುಕತೆ ನಡೆಸಿದೆ. ಇಂಜಿನಿಯರ್ ಗಳು ಸೇರಿರುವ ಪರಿಣತರು ಈ ತಂಡದಲ್ಲಿದ್ದಾರೆ. ಶೀಘ್ರದಲ್ಲೇ ಇಲ್ಲಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


