ಕಾಸರಗೋಡು: ಆಂಬುಲೆನ್ಸ್ ಮೂಲಕ ರೋಗಿಗಳನ್ನು ಕಾಸರಗೋಡಿನಿಂದ ಮಂಗಳೂರಿಗೆ ಕರೆದೊಯ್ಯುವ ವೇಳೆ ಕೆಲವು ನಿಬಂಧನೆಗಳೊಂದಿಗೆ ಗಡಿಪ್ರದೇಶ ತಲಪ್ಪಾಡಿಯಲ್ಲಿ ತೆರಳಲು ಕರ್ನಾಟಕ ಸರಕಾರ ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈಗಿನ ಸೂಚನೆ ಪ್ರಕಾರ ಕರ್ನಾಟಕ ಸರಕಾರ ತಿಳಿಸಿರುವ ನಿಬಂಧನೆಗಳು ಇಂತಿವೆ:
ಕೊರೋನಾ ರೋಗಿಗಳಲ್ಲದೇ ಇರುವ, ಇತರ ರೋಗದಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಕರೆತರುವ ಸರಕಾರಿ ಸ್ವಾಮ್ಯದ ಆಂಬುಲೆನ್ಸ್ ಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದೇ ಇರುವ ಕಾರ್ಡಿ ಯಾಕ್, ನ್ಯೂರೋ, ಆರ್.ಟಿ.ಎ., ಹೆಸರಿಗೆಯ ನಂತರದ ಸಂಕೀರ್ಣ ಸ್ಥಿತಿಗಳು ಇತ್ಯಾದಿ ಪ್ರಕರಣಗಳಲ್ಲಿರುವ ರೋಗಿಗಳನ್ನು ಕರೆತರುವ ಆಂಬುಲೆನ್ಸ್ ಗಳು ಮಾತ್ರ ತೆರಳಬಹುದು.
ರೋಗಿ, ವೈದ್ಯಾಧಿಕಾರಿಯ ದೃಡೀಕರಣ ಪತ್ರ ಹೊಂದಿರಬೇಕು. ಇದರಲ್ಲಿ ರೋಗಿ ಕೋವಿಡ್ 19 ಸೋಂಕು ಬಾಧಿತನಲ್ಲ/ ಯಾವ ರೀತಿಯ ಕೋವಿಡ್ 19ರ ಲಕ್ಷಣವನ್ನೂ ಹೊಂದಿಲ್ಲ(ಯಾ ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್), ವಿದೇಶದಲ್ಲಿ ಯಾ ಇತರ ರಾಜ್ಯಗಳಲ್ಲಿ ಪ್ರಯಾಣನಡೆಸಿದವರಲ್ಲ, ಕಾಸರಗೋಡಿನಲ್ಲಿ ಚಿಕಿತ್ಸೆಗೆ ಸೌಲಭ್ಯವಿಲ್ಲದ,ಕಣ್ಣೂರಿಗೆ ತೆರಳಲು ಸಾಧ್ಯವಾಗದೇ ಇರುವ ಸ್ಥಿತಿಯ ರೋಗಿ ಎಂದು ವೈದ್ಯಾಧಿಕಾರಿ ದೃಡೀಕರಣ ಪತ್ರ ನೀಡಿರಬೇಕು.
ಮೆಡಿಕಲ್ ಸರ್ಟಿಫಿಕೆಟ್ ನೀಡುವ ನಿಟ್ಟಿನಲ್ಲಿ ವಿಶೇಷ ಆದೇಶದೊಂದಿಗೆ ವೈದ್ಯಾಧಿಕಾರಿ ಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.
ಚಿಕಿತ್ಸೆ ಸಂಬಂಧ ತುರ್ತು ಅಗತ್ಯಗಳಲ್ಲಿ ಮಾತ್ರ ಪ್ರಯಾಣಕ್ಕೆ ಅನುಮತಿ ಇರುವುದು. ರೋಗಿಯನ್ನು ಕರೆದೊಯ್ಯುವ ಆಂಬುಲೆನ್ಸ್ ನ್ನು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಮಂತ್ರಾಲಯದ ಸಲಹೆ-ಸೂಚನೆ ಪ್ರಕಾರ ರೋಗಾಣುಮುಕ್ತವಾಗಿಸಬೇಕು.
ರೋಗಿಯ ಜೊತೆಗೆ ಒಬ್ಬ ಸಹಾಯಕ ಮತ್ತು ಚಾಲಕ , ಒಬ್ಬ ಪಾರಾ ಮೆಡಿಕಲ್ ಸಿಬ್ಬಂದಿ ಮಾತ್ರ ಇರಬೇಕು.
ಚುನಾವಣೆ ಗುರುತು ಚೀಟಿ/ ಪಾಸ್ ಪೆÇೀರ್ಟ್/ ಆಧಾರ್ ಕಾರ್ಡ್ ಎಂಬ ದಾಖಲೆಗಳನ್ನು ರೋಗಿಗಳು ಹಾಜರುಪಡಿಸಬೇಕು.
ಸರಕಾರಿ ಮೆಡಿಕಲ್ ಅಧಿಕಾರಿ ದೃಡೀಕರಿಸಿದ ಕೋವಿಡ್ ಕ್ರೈಟೀರಿಯಾ ಚೆಕ್ಲಿಸ್ಟ್ ಜತೆಗಿರಬೇಕು.
ಪಿ.ಪಿ.ಇ.ಕಿಟ್, ಐಸೊಲೇಷನ್ ಐ.ಸಿ.ಯು. ಇತ್ಯಾದಿ ವೆಚ್ಚಗಳನ್ನು ರೋಗಿಯೇ ಭರಿಸಬೇಕು.
ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಡಿಸಿರುವಕಾರಣ ಇತರ ಚಿಕಿತ್ಸೆ ಇಲ್ಲಿ ಲಭ್ಯವಿದೆಯೇ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
(ಚಿತ್ರ ಮಾಹಿತಿ: ಮಂಗಳೂರಿಗೆ ಚಿಕಿತ್ಸೆಗಾಗಿ ತೆರಳುವವರು ಜೊತೆಗಿರಿಸಬೇಕಾದ ಚೆಕ್ ಲಿಸ್ಟ್ ನ ಮಾದರಿ.)



