ಕಾಸರಗೋಡು: ಮಹಿಳಾ ಸಬಲೀಕರಣ ರಂಗದಲ್ಲಿ ಜಗತ್ತಿಗೆ ಮಾದರಿಯಾದ ಕೇರಳ ರಾಜ್ಯದ ಕುಟುಂಬಶ್ರೀ ಸ್ವ ಸಹಾಯ ಸಂಘಗಳು ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಈ ವಲಯದ ಕಾರ್ಯಕರ್ತರು ಸಾಧ್ಯವಾಗಿರುವ ಎಲ್ಲ ಕಡೆಗಳಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಯಾರೂ ಉಪವಾಸದಲ್ಲಿರಕೂಡದು ಎಂಬ ರಾಜ್ಯ ಸರಕಾರ ಜಾರಿಗೊಳಿಸಿರುವ ಸಮುದಾಯ ಅಡುಗೆಮನೆ ಯೋಜನೆಯ ಬೆನ್ನೆಲುಬಾಗಿ, ಅಡುಗೆ ಸಿದ್ಧಪಡಿಸುವಿಕೆ ಮತ್ತು ವಿತರಣೆಗೆ ಆದ್ಯತೆ ನೀಡಿ ಮುಂದಿನ ಸಾಲಿನಲ್ಲಿ ನಿಂತದ್ದು ಕುಟುಂಬಶ್ರೀ ಘಟಕಗಳು. ಅನೇಕ ಗ್ರಾಮಪಂಚಾಯತ್ ಗಳಲ್ಲಿ ಕುಟುಂಬಶ್ರೀ ಕಾರ್ಯಕರ್ತರು ನಡೆಸಿಕೊಂಡು ಬರುತ್ತಿರುವ ಕ್ಯಾಂಟೀನ್ ಗಳು ಈಗ ಸಮುದಾಯ ಅಡುಗೆಮನೆಗಳಗಿ ಚಟುವಟಿಕೆ ನಡೆಸುತ್ತಿವೆ.
ಅಡುಗೆ ಮನೆಗಳಿಗೆ ಹಿತ್ತಿಲ ತರಕಾರಿಗಳು:
ಕುಟುಂಬಶ್ರೀಯ ಜಾಯಿಂಟ್ ಲಯಾಬಿಲಿಟಿ ಗ್ರೂಪ್ ಸದಸ್ಯರು ನಡೆಸಿರುವ ಜೈವಿಕ ತರಕಾರಿಗಳು ಈಗ ಸಮುದಾಯ ಅಡುಗೆ ಮನೆಗಳಲ್ಲಿ ಅಡುಗೆಗೆ ಬಳಕೆಯಾಗತ್ತಿವೆ. ವಿಷು ಹಬ್ಬಕ್ಕಾಗಿ ಬೆಳೆಸಿದ್ದ ಸೌತೆಕಾಯಿ, ಹರಿವೆ ಇತ್ಯಾದಿಗಳೆಲ್ಲವೂ ಈಗ ಉಚಿತವಾಗಿ ಸಮುದಾಯ ಅಡುಗೆ ಮನೆಗಳಿಗೆ ತಲಪುತ್ತಿವೆ. ತರಕಾರಿಗಳಿಂದ ತೊಡಗಿ ಭೋಜನ ಪೆÇಟ್ಟಣವಾಗಿಸುವಲ್ಲಿ ಬಳಕೆಯಾಗುವ ಬಾಳೆ ಎಲೆ ವರೆಗೆ ಎಲ್ಲವೂ ಕುಟುಂಬಶ್ರೀಯ ತಾಯಂದಿರು ಬೆಳೆದವೇ ಆಗಿವೆ ಎಂಬುದು ಗಮನಾರ್ಹ. ಕಾಸರಗೋಡು ಜಿಲ್ಲೆಯಲ್ಲಿ ಈ ಯೋಜನೆಯ ಪ್ರಯೋಜನ ಪಡೆಯುತ್ತಿರುವವರು ದಿನಕ್ಕೆ 13 ಸಾವಿರ ಮಂದಿ ಇದ್ದಾರೆ.
ಸಮುದಾಯ ಅಡುಗೆ ಮನೆಗಳಲ್ಲಿ ಮಧ್ಯಾಹ್ನ ಮಾತ್ರ ಭೋಜನ ವಿತರಣೆನಡೆಸುವುದರಿಂದ ತೊಡಗಿದಿನದ ಮೂರೂ ಹೊತ್ತು ಆಹಾರ ವಿತರಣೆ ನಡೆಸುವವರೆಗೂ ಇವೆ. ಕಾಸರಗೋಡು ಜಿಲ್ಲೆಯ 33 ಗ್ರಾಮಪಂಚಾಯತ್ ಗಳಲ್ಲೂ, 3 ನಗರಸಭೆಗಳಲ್ಲೂ ಒಟ್ಟು 55 ಸಮುದಾಯ ಅಡುಗೆಮನೆ ಗಳು ಚಟುವಟಿಕೆ ನಡೆಸುತ್ತಿದ್ದು, ಇಲ್ಲಿ ಕುಟುಂಬಶ್ರೀಯ 88 ಘಟಕಗಳು ಸಕ್ರಿಯವಾಗಿವೆ.


