ಕಾಸರಗೋಡು: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ನಿರ್ಮಾಣದಲ್ಲಿ ಕುಟುಂಬಶ್ರೀ ಘಟಕಗಳು ಮುಂಚೂಣಿಯಲ್ಲಿವೆ. ಜಿಲ್ಲೆಯ ಎಲ್ಲ ಗ್ರಾಮಪಂಚಾಯತ್ ಗಳಲ್ಲೂ ಮಾಸ್ಕ್ ನಿರ್ಮಾಣ ನಡೆಯುತ್ತಿದೆ. ಜಿಲ್ಲೆಯ ಮಾಸ್ಕ್ ಗಳ ಕ್ಷಾಮ ಪರಿಹರಿಸುವಲಲಿ ಒಂದು ಹಂತದ ವರೆಗೆ ಕುಟುಂಬಶ್ರೀ ಘಟಕಕಗಳಿಗೆ ಸಾಧ್ಯವಾಗಿದೆ. ಜಿಲ್ಲಾ ಮಿಷನ್ ಗೆ ಲಭಿಸುವ ಆರ್ಡರ್ ಪ್ರಕರ ಕಿರು ವ್ಯಾಪಾರ ಸಂಸ್ಥೆಗಳಿಗೆ ಸಾನಿಟೈಸರ್ ವಿತರಿಸುವ ಕಾಯಕವೂ ಕುಟುಂಬಶ್ರೀಯಿಂದ ನಡೆಯುತ್ತಿದೆ. ಚೆಂಗಳದಲ್ಲಿ ಚಟುವಟಿಕೆ ನಡೆಸುತ್ತಿರುವ ಕುಟುಂಬಶ್ರೀ ಯೂನಿಟ್ ಒಂದರಿಂದ ಮಾತ್ರ ಈ ವರೆಗೆ 606 ಲೀಟರ್ ಸಾನಿಟೈಸರ್ ಉತ್ಪಾದಿಸಿ ವಿತರಿಸಲಾಗಿದೆ.
ಉಚಿತ ಕಿಟ್ ಪ್ಯಾಕಿಂಗ್:
ಅನಿವಾರ್ಯ ಸಾಮಾಗ್ರಿಗಳ ಕಿಟ್ ವಿತರಣೆ ನಡೆಸುವ ಯೋಜನೆ ಪಡಿತರ ಅಂಗಡಿಗಳಲ್ಲಿ ಆರಂಭಗೊಂಡ ವೇಳೆ ಸಪ್ಲೈ ಕೋಗೆ ಸಹಕಾರಿಯಾದುದು ಕುಟುಂಬಶ್ರೀ ಸದಸ್ಯರು. ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಅನಿವಾರ್ಯ ಸಾಮಾಗ್ರಿಗಳ ಪ್ಯಾಕಿಂಗ್ ಗಳಲ್ಲಿ 79 ಕುಟುಂಬಶ್ರೀ ಸದಸ್ಯರು ಸಕ್ರಿಯರಾಗಿದ್ದಾರೆ.
ಕೊರೋನಾ ಸೋಂಕು ಹೆಚ್ಚಳ ವಿವಿಧ ವಲಯಗಳಿಗೆ ತೊಡಕಾಗಿರುವಂತೆ ಕುಟುಂಬಶ್ರೀ ಘಟಕಗಳಿಗೂ ಸಮಸ್ಯೆ ತಂದೊಡ್ಡಿದೆ. ಅಮೃತಂ ಪುಡಿ ನಿರ್ಮಾಣ ಘಟಕಗಳಾದ ನ್ಯೂಟ್ರಿಮಿಕ್ಸ್ ಶಾಪ್ ಗಳು ಮಾತ್ರ ಈಗ ತೆರೆದು ಕಾರ್ಯಾಚರಿಸುತ್ತಿವೆ. ಮುಗ್ಗಟ್ಟು ತಲೆದೋರಿರುವ ಈ ಸಂದರ್ಭದಲ್ಲೂ ಇಲ್ಲಿನ ಕಾರ್ಯಕರ್ತೆಯರು ರಾಜ್ಯ ಸರಕಾರ ಮತ್ತು ಸಾರ್ವಜನಿಕರಿಗೆ ಹೆಗಳು ನೀಡುವಲ್ಲಿ ಹಿಂದೆ ಬಿದ್ದಿಲ್ಲ.


