ಪೆರ್ಲ: ಕೊರೋನ ಮಹಾ ಮಾರಿ ವಿರುದ್ಧ ಎಣ್ಮಕಜೆ ಪಂಚಾಯತಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಪೆರ್ಲದಲ್ಲಿ ಕೊರೋನ ಕೇರ್ ಸೆಂಟರ್ ಸಜ್ಜುಗೊಳಿಸಿದ್ದು ಅದಕ್ಕಿರುವ ಬೆಡ್, ಬೆಡ್ ಶೀಟ್ ಹಾಗೂ ತಲೆದಿಂಬುಗಳನ್ನು ಎಣ್ಮಕಜೆ- ದುಬೈ ಕೆ ಎಂ ಸಿ ಸಿ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ವಿತರಿಸಿ ಮಾದರಿಯಾದರು.
ಗಲ್ಪ್ ದೇಶಗಳಲ್ಲಿ ಕೋವಿಡ್ 19 ವಿಪರೀತ ಪರಿಣಾಮ ಬೀರಿದ್ದು ಅಲ್ಲಿರುವ ಭಾರತೀಯ ನಿವಾಸಿಗಳಲ್ಲಿ ಆತಂಕದ ಮನೆಮಾಡಿರುವ ಸಂದರ್ಭದಲ್ಲಿ ದುಬೈ - ಎಣ್ಮಕಜೆ ಕೆ ಎಂ ಸಿ ಸಿ ತೋರಿದ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಯಿತು. ಪಂಚಾಯತಿ ಕಾರ್ಯದರ್ಶಿ ಮರಿಯಾ ಗೊರೊತಿ ಅವರಿಗೆ ಕೆಎಂಸಿಸಿ ಪ್ರತಿನಿಧಿ ನೌಷಾದ್ ಪೆರ್ಲ ಬೆಡ್ ಮತ್ತು ಇತರ ವಸ್ತುಗಳನ್ನು ಹಸ್ತಾಂತರಿಸಿದರು. ಹೆಡ್ ಕ್ಲರ್ಕ್ ಪಿತಾಂಬರನ್, ವೈದ್ಯಾಧಿಕಾರಿ ಡಾ.ದೀಪಾರಾಜನ್ ಮೊದಲಾದವರು ಉಪಸ್ಥಿತರಿದ್ದರು.


