ಉಪ್ಪಳ: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಮಂಗಲ್ಪಾಡಿ ಗ್ರಾಮ ಪಂಚಾಯತಿಯ 5 ನೇ ವಾರ್ಡ್ ಅಲ್ ನವಾಝ್ ಕುಟುಂಬಶ್ರೀ ನೆರೆಕೂಟ ಹೆಗಲು ನೀಡಿದೆ. ಈ ಘಟಕ 10 ಸಾವಿರ ರೂ. ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿಧಿಗೆ ದೇಣಿಗೆ ನೀಡುವ ಉದ್ದೇಶದಿಂದ ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಇ.ಸುರೇಂದ್ರನ್ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಮಂಗಲ್ಪಾಡಿ ಕೈಕಂಬದಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಷಾಹುಲ್ ಹಮೀದ್ ಬಂದ್ಯೋಡು, ಸಿ.ಡಿ.ಎಸ್. ಅಧ್ಯಕ್ಷೆ ಸುಶೀಲಾ, ಕುಟುಂಬಶ್ರೀ ನೆರೆಕರೆ ಕೂಟ ಅಧ್ಯಕ್ಷೆ ನಜುಮುನ್ನೀಸಾ, ಕಾರ್ಯದರ್ಶಿ ಖದೀಜತ್ ಕುಬ್ರಾ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ಹೋರಾಟಕ್ಕೆ ಹೆಗಲು
0
ಏಪ್ರಿಲ್ 14, 2020