ನವದೆಹಲಿ: ಕೊರೋನಾ ವಿರುದ್ಧ ಕೇಂದ್ರ ಸರ್ಕಾರ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದರೂ ಹರಡುವಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನು ಕಳೆದ 24 ಗಂಟೆಯಲ್ಲಿ 43 ಮಂದಿ ಬಲಿಯಾಗಿದ್ದು ಹೊಸದಾಗಿ 991 ಪ್ರಕರಣಗಳು ದಾಖಲಾಗಿವೆ. ಇನ್ನು ದೇಶದಲ್ಲಿ ಸಾವಿನ ಸಂಖ್ಯೆ 488ಕ್ಕೇರಿಕೆಯಾಗಿದೆ.
ಭಾರತದಲ್ಲಿ ಒಟ್ಟಾರೆ 14,378 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಮಹಾಮಾರಿಯಿಂದ 2000 ಮಂದಿ ಚೇತರಿಸಿಕೊಂಡಿದ್ದಾರೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಭಾರತದಲ್ಲಿ ಮಹಾರಾಷ್ಟ್ರ ಹೆಚ್ಚು ಸೋಂಕಿಗೆ ಸಿಲುಕಿರುವ ರಾಜ್ಯವಾಗಿದ್ದು ಅತೀ ಹೆಚ್ಚು ಸೋಂಕು ಹಾಗೂ ಸಾವು ಸಂಭವಿಸಿದೆ. ಸದ್ಯ ರಾಜ್ಯದಲ್ಲಿ 3,323 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
ಕರ್ನಾಟಕದಲ್ಲಿ ಕೊರೋನಾಗೆ ಇಂದು ಮತ್ತೊಂದು ಬಲಿಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 14ಕ್ಕೇರಿದ್ದು ಸೋಂಕಿತರ 384ಕ್ಕೆ ಏರಿಕೆಯಾಗಿದೆ.


